ಬೆಳ್ತಂಗಡಿ: ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆಂದು ತೆರಳಿದ್ದ ಬೆಳ್ತಂಗಡಿ ಪೋಲೀಸರು ಹಾಗೂ ಮನೆಯವರ ನಡುವೆ ವಾಗ್ವಾದ ನಡೆದಿದ್ದು, ಪರಸ್ಪರ ಹಲ್ಲೆ ನಡೆಸಿರುವ ಬಗ್ಗೆ ಆರೋಪ-ಪ್ರತ್ಯಾರೋಪ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಿಸಲಾಗಿದೆ. ಘಟನೆಗೆ ಕಾರಣವಾದ ಪ್ರಕರಣದಲ್ಲಿ ಕೊಯ್ಯೂರು ಗ್ರಾಮದ ಪೆರ್ಮುದೆ ನಿವಾಸಿ ಪೌಲ್ ಪತ್ರಾದೋ ಎಂಬವರ ಪುತ್ರ ಮೇಸ್ತ್ರಿ ಕೆಲಸ ಮಾಡುವ ಅನಿಲ್ ಎಂಬರಿಗೆ ಸವಣಾಲು ಗ್ರಾಮದ ನಿತ್ಯಾದರ ನಿವಾಸಿ ಕಿರಣ್ ವಾಲ್ಟರ್ ಎಂಬಾತ 5.10 ಲಕ್ಷ ರೂ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಅನಿಲ್ ಅವರ ಪತ್ನಿಯನ್ನು ಇಸ್ರೇಲ್ಗೆ ಕೆಲಸಕ್ಕಾಗಿ ಕರೆದೊಯ್ಯಲು ವೀಸಾ ಕೊಡಿಸುವುದಾಗಿ ನಂಬಿಸಿ ಹಂತ ಹಂತವಾಗಿ ಕಳೆದ ಒಂದು ವರ್ಷದಿಂದ ರೂ. 5.10 ಲಕ್ಷ ಪಡೆದಿದ್ದರು. ಆದರೆ ಕೊನೆಗೂ ವೀಸಾ ನೀಡದೆ ವಂಚಿಸಿದ್ದಾರೆ ಎಂದು ಅನಿಲ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ವಂಚಿಸಿದಾತ ಎರಡು ದಿನಗಳಲ್ಲಿ ಮತ್ತೆ ಇಸ್ರೇಲಿಗೆ ತೆರಳಲಿದ್ದಾರೆ ಎಂದು ಮಾಹಿತಿ ದೊರೆತ ಹಿನ್ನಲೆಯಲ್ಲಿ ಅನಿಲ್ ನೀಡಿದ ದೂರಿನಂತೆ ಸೋಮವಾರ ಸಂಜೆಯ ವೇಳೆ ಬೆಳ್ತಂಗಡಿ ಎಸ್ಸೈ ಸಂದೇಶ್, ಎಎಸೈ ಕಲೈಮಾರ್ ಹಾಗೂ ಹಾಗೂ ಹೆಚ್,ಸಿ ಲಾರೆನ್ಸ್ ಅವರು ತನಿಖೆಗಾಗಿ ಮನೆಗೆ ತೆರಳಿದ್ದರು. ಮನೆಯಲ್ಲಿದ್ದ ಕಿರಣ್ ವಾಲ್ಟರ್ನನ್ನು ಕರೆದು ವಿಚಾರಿಸುತ್ತಿದ್ದ ವೇಳೆ ಏಕಾಏಕಿ ಆರೋಪಿ ಹಾಗೂ ಆತನ ಮನೆಯವರು ಪೊಲೀಸರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಎಸ್ಸೈ ಸಂದೇಶ್ ಹಾಗೂ ಪೊಲೀಸರು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ಬೆನ್ನಿಗೆ ಬೆಳ್ತಂಗಡಿ ಎಸ್ಸೈ ಅವರನ್ನು ಅಮಾನತು ಮಾಡಲಾಗಿದೆ ಎಂಬ ವದಂತಿ ಕೇಳಿ ಬಂಸದಿದ್ದು, ಬೆಳ್ತಂಗಡಿ ಠಾಣೆಯ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಕಾರ್ಯ ನಿರ್ವಹಿಸುತ್ತಿರುವ ಠಾಣಾಧಿಕಾರಿಯ ವಿರುದ್ಧ ಯಾವುದೇ ಕಾರಣಕ್ಕೂ ಕ್ರಮ ಕೈಗೊಳ್ಳಬಾರದು ಎಂದು ಒತ್ತಾಯಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.