ಅಹ್ಮದಾಬಾದ್: ಇ-ವೋಟಿಂಗ್ ವ್ಯವಸ್ಥೆಯನ್ನು ಪಂಚಾಯತ್ ಚುನಾವಣೆಗೂ ವಿಸ್ತರಿಸಲು ಗುಜರಾತ್ ಸರ್ಕಾರ ಚಿಂತನೆ ನಡೆಸಿದೆ. ಕಳೆದ ಮುನ್ಸಿಪಲ್ ಚುನಾವಣೆಯಲ್ಲೂ ಇದನ್ನು ಅಳವಡಿಸಲಾಗಿತ್ತು.
ಪ್ರಸ್ತುತ ರಾಜ್ಯದ 8 ಮುನ್ಸಿಪಲ್ ಕಾರ್ಪೋರೇಶನ್ಗಳಲ್ಲಿ ಮಾತ್ರ ಇ-ವೋಟಿಂಗ್ ಸೌಲಭ್ಯವಿದೆ. ಈಲ್ಲಾ, ತಾಲೂಕು ಮತ್ತು ಪಂಚಾಯತ್ ಮತದಾರರಿಗೆ ಈ ವ್ಯವಸ್ಥೆಯನ್ನು ಇನ್ನೂ ನೀಡಲಾಗಿಲ್ಲ. ಹೀಗಾಗಿ ಈ ಬಾರಿಯಿಂದ ಇದನ್ನು ಅಳವಡಿಸಲು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ.
ಅಲ್ಲಿನ ಪಂಚಾಯತ್ ಇಲಾಖೆ ಈ ಬಗ್ಗೆ ದೇಶದಾದ್ಯಂತದಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿನ ಇಂಟರ್ನೆಟ್ ಕನೆಕ್ಟಿವಿಟಿ ಬಗ್ಗೆ ಮಾಹಿತಿ ಪಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.