ನವದೆಹಲಿ: 61 ನಿಮಿಷ ಮತ್ತು 90 ನಿಮಿಷಗಳ ನಡುವೆ ಪ್ರಯಾಣ ಬೆಳೆಸುವ ಏರ್ ಇಂಡಿಯಾ ವಿಮಾನಗಳಲ್ಲಿ ಇನ್ನು ಮುಂದೆ ಬಿಸಿಯಾದ ಶಾಖಾಹಾರಿ ಆಹಾರಗಳು ಮಾತ್ರ ಲಭ್ಯವಾಗಲಿದೆ. ಹೊಸ ವರ್ಷದಿಂದ ಈ ನಿಯಮ ಜಾರಿಗೆ ಬರಲಿದೆ.
ಡಿ.23ರಂದು ಆಹಾರದಲ್ಲಿನ ಬದಲಾವಣೆಯ ನೂತನ ಸೆರ್ಕ್ಯುಲರ್ನ್ನು ಏರ್ಇಂಡಿಯಾ ಬಿಡುಗಡೆ ಮಾಡಿತ್ತು, ಇದಕ್ಕೆ ಕ್ಯಾಪ್ಟನ್ ಡಿಎಕ್ಸ್ ಪೈಸ್, ಜನರಲ್ ಮ್ಯಾನೇಜರ್(ಕ್ಯಾಬಿನ್ ಕ್ರ್ಯೂ) ಏರ್ ಇಂಡಿಯಾ ಸಮ್ಮತಿಯನ್ನು ಸೂಚಿಸಿದ್ದರು.
‘ಸಮಯದ ಅಭಾವದಿಂದಾಗಿ ಪ್ಯಾಸೆಂಜರ್ಗಳಿಗೆ ಆಹಾರವನ್ನು ಚೂಸ್ ಮಾಡುವ ಆಯ್ಕೆಯಿಲ್ಲ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಏರ್ಇಂಡಿಯಾ ಅಧಿಕಾರಿಗಳು ಹೇಳಿದ್ದಾರೆ.
ಟೀ ಮತ್ತು ಕಾಫಿಗಳನ್ನೂ ಮೆನುವಿನಲ್ಲಿ ಹಾಕಲಾಗಿಲ್ಲ, ಸಮಯದ ಉಳಿತಾಯ ಮತ್ತು ಮಾಂಸಾಹಾರ ಸರ್ವ್ ಮಾಡುವ ವೇಳೆ ಆಗುವ ಆವಾಂತರಗಳಿಂದ ತಪ್ಪಿಸಲು ಈ ಕ್ರಮ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.