ಈಗಿನ ದಿನಗಳಲ್ಲಿ ಭಿಕ್ಷೆ ಬೇಡಿ ಶ್ರೀಮಂತರಾಗುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಪಾಟ್ನಾದ ಅಂಗವಿಕಲ ಭಿಕ್ಷುಕನೊಬ್ಬ ಕೋಟ್ಯಾಧಿಪತಿಯಾಗಿ ಈಗ ಎಲ್ಲರು ನಿಬ್ಬೆರಗಾಗುವಂತೆ ಮಾಡಿದ್ದಾನೆ.
ಆತನ ಹೆಸರು ಪಪ್ಪು ಕುಮಾರ್, ಪ್ರತಿದಿನವೂ ಪಾಟ್ನಾದಲ್ಲಿ ಭಿಕ್ಷೆ ಬೇಡುತ್ತಿರುತ್ತಾನೆ. ಒಂದು ಕಾಲದಲ್ಲಿ ಎಂಜಿನಿಯರ್ ಆಗಬೇಕೆಂಬ ಹಂಬಲವಿದ್ದ ಈತನನ್ನು ಅಪಘಾತವೊಂದು ಅಂಗವಿಕಲನನ್ನಾಗಿ ಮಾಡಿತು. ಬಳಿಕ ಈತ ತನಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಮತ್ತೊಂದು ಆಸ್ತಿ ಖರೀದಿಸುವ ಯೋಚನೆ ಮಾಡಿದ. ಆದರೆ ತನ್ನ ಮುರಿದ ಕೈ ಮತ್ತು ಕಾಲಿಂದ ಜನರ ಅನುಕಂಪ ಗಿಟ್ಟಿಸಬಹುದು ಅದರಿಂದ ಹಣ ಸಂಪಾದಿಸಬಹುದು ಎಂಬ ಯೋಚನೆ ಆತನಿಗೆ ಹೊಳೆಯಿತು. ಅಲ್ಲಿಂದ ಭಿಕ್ಷೆ ಬೇಡುವುದೇ ಆತನ ಕಾಯಕವಾಯಿತು.
ಪ್ರತಿದಿನ ಪಾಟ್ನಾ ರೈಲ್ವೇ ಸ್ಟೇಶನ್ನಿನಲ್ಲಿ ಈತ ಭಿಕ್ಷೆ ಬೇಡುತ್ತಾನೆ, ಆದರೆ ಭಿಕ್ಷಾಟನೆ ನಿರ್ಮೂಲನೆಯ ಅಭಿಯಾನದ ಅಂಗವಾಗಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ನವರು ಒಂದು ದಿನ ಈತನನ್ನು ಬಂಧಿಸಿದಾಗ ಈತ ಕೋಟ್ಯಾಧಿಪತಿ ಎಂಬ ವಿಷಯ ಬಹಿರಂಗಗೊಂಡಿದೆ.
ಈತನ ಬಳಿ 4 ಎಟಿಎಂ ಕಾರ್ಡ್ ಮತ್ತು 5 ಲಕ್ಷ ನಗದು ಸಿಕ್ಕಿದೆ, ಮತ್ತಷ್ಟು ವಿಚಾರಣೆ ನಡೆಸಿದಾಗ ಸ್ಥಳೀಯ ವ್ಯಾಪಾರಿಯೊಬ್ಬರಿಗೆ ಅಧಿಕ ಬಡ್ಡಿಗೆ 10 ಲಕ್ಷ ಸಾಲ ನೀಡಿದ ಬಗ್ಗೆ ವಿವರಿಸಿದ್ದಾನೆ. 1.25 ಕೋಟಿ ಮೌಲ್ಯದ 2000 square feet ನ ಭೂಮಿಯೂ ಈತನಿಗೆ ಇದೆ.
ಇಷ್ಟೆಲ್ಲಾ ಹಣವಿದ್ದರೂ ಚಿಕಿತ್ಸೆ ಯಾಕೆ ಪಡೆದುಕೊಂಡಿಲ್ಲ ಎಂಬ ಪ್ರಶ್ನೆಗೆ ಈತ ನೀಡಿದ ಉತ್ತರ, ’ಚಿಕಿತ್ಸೆ ಪಡೆದು ಗುಣಮುಖನಾದರೆ ಭಿಕ್ಷೆ ಬೇಡುವುದು ಹೇಗೆ? ಎಂಬುದು.
ಒಟ್ಟಿನಲ್ಲಿ ಪಪ್ಪು ಕುಮಾರ್ರಂತಹ ಕೋಟ್ಯಾಧಿಪತಿ ಭಿಕ್ಷುಕರ ಉಪಟಳದಿಂದಾಗಿ ನಿಜವಾಗಿಯೂ ಭಿಕ್ಷುಕರಾಗಿರುವವರನ್ನು ಜನ ನಂಬುವುದು ಕಷ್ಟವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.