ಬೆಳ್ತಂಗಡಿ : ತನು ಶುದ್ಧಿಯಜತೆಗೆ ಮನವ ಶುದ್ಧಿಯನ್ನು ಮಾಡಿದರೆ, ಅಹಂಕಾರ, ಸ್ವಾರ್ಥದೂರವಾಗುತ್ತದೆಎಂದು ಬೆಂಗಳೂರಿನ ಪ್ರಸನ್ನಟ್ರಸ್ಟ್ ಸ್ಥಾಪಕಾಧ್ಯಕ್ಷ ಸ್ವಾಮಿ ಸುಖಭೋಧಾನಂದಜೀ ನುಡಿದರು.
ಅವರು ಧರ್ಮಸ್ಥಳ ಶಾಂತಿವನ ಪ್ರಕೃತಿಚಿಕಿತ್ಸಾಆಸ್ಪತ್ರೆಯಲ್ಲಿ ಸಾಧಕರಿಗೆ ಸ್ಫೂರ್ತಿಯ ವಚನ ನೀಡಿದರು. ಜೀವಾತ್ಮ ಹಾಗೂ ಪರಮಾತ್ಮನ ನಡುವಿನ ಸಮೀಕರಣ ಮಾಡುತ್ತಿರಬೇಕು. ಅದಕ್ಕಾಗಿ ಅಹಂಕಾರ ತ್ಯಜಿಸಬೇಕು. ಆಗ ಆತ್ಮದ ಶುದ್ದೀಕರಣವಾಗುತ್ತದೆ. ಧನಾತ್ಮಕ ಚಿಂತನೆಯಿಂದ ಜೀವನದಲ್ಲಿ ಸುಖ, ಶಾಂತಿ ದೊರೆಯುತ್ತದೆ. ಸದಾಋಣಾತ್ಮಕ ಯೋಚನೆಯಲ್ಲಿದ್ದರೆ ದೇಹ, ಮನಸ್ಸುಕೆಡುತ್ತದೆ ಎಂದರು.
ಶಾಂತಿವನಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಐ. ಶಶಿಕಾಂತ್ ಜೈನ್, ಆಯುಷ್ ವಿಭಾಗದ ಮುಖ್ಯಸ್ಥ ಮಂಜುನಾಥ್, ಎಸ್ಡಿಎಂ ಪ್ರಕೃತಿಚಿಕಿತ್ಸಾ ಕಾಲೇಜಿನ ಯೋಗ ಡೀನ್ ಡಾ| ಶಿವಪ್ರಸಾದ್ ಶೆಟ್ಟಿ, ಶಾಂತಿವನ ಪ್ರಕೃತಿಚಿಕಿತ್ಸೆಆಸ್ಪತ್ರೆಯ ವೈದಾಧಿಕಾರಿ ಡಾ| ಸೆಲ್ವಕುಮಾರ್, ಮೆನೇಜರ್ ಸ್ವಸ್ತಿಕ್ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.