ನವದೆಹಲಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಕುಟುಂಬದ ಮೇಲೆ ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ 20 ವರ್ಷಗಳ ಕಾಲ ಗೂಢಚರ್ಯೆ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಮುಜುಗರಕ್ಕೊಳಗಾಗಿರುವ ಕಾಂಗ್ರೆಸ್ ಇದೀಗ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ ತೊಡಗಿದೆ.
‘ನೇತಾಜೀ ಕುಟುಂಬದ ಮೇಲೆ ಗೂಢಚರ್ಯೆ ನಡೆಸಲಾಗಿತ್ತು ಎಂದು ಹೇಳಲಾಗಿರುವ ಸಂದರ್ಭದಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಗೃಹಸಚಿವರಾಗಿದ್ದರು. ಅವರು ಕೂಡ ಗೂಢಚರ್ಯೆಯ ಭಾಗವಾಗಿದ್ದರೇ?’ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.
ಅಲ್ಲದೇ ಗುಜರಾತ್ನಲ್ಲಿ ಯುವತಿಯೋರ್ವಳ ಮೇಲೆ ಗೂಢಚರ್ಯೆ ನಡೆಸಿದ ಆರೋಪವನ್ನು ಉಲ್ಲೇಖಿಸುವ ಮೂಲಕ ಅವರು ಮೋದಿ ಮತ್ತು ಅಮಿತ್ ಷಾ ವಿರುದ್ಧ ಕಿಡಿಕಾರಿದ್ದಾರೆ.
‘ಆ 20 ವರ್ಷದಲ್ಲಿ ಸರ್ದಾರ್, ಶಾಸ್ತ್ರೀಜಿ, ಜಿಬಿ ಪಂಥ್, ಕಟ್ಜು ಅವರು ಗೃಹಸಚಿವರಾಗಿದ್ದರು. ನೆಹರೂ ಬಳಿಕ ಶಾಸ್ತ್ರೀಜಿ ಪ್ರಧಾನಿಯಾಗಿದ್ದರು. ಅವರು ಕೂಡ ಗೂಢಚರ್ಯೆಯ ಭಾಗವಾಗಿದ್ದರೇ? ತನ್ನ ಗೃಹಸಚಿವ ಅಮಿತ್ ಷಾ ಗೂಢಚರ್ಯೆ ನಡೆಸುವಾಗ ಸಿಎಂ ಆಗಿದ್ದ ಮೋದಿ ಏನು ಮಾಡುತ್ತಿದ್ದರು?’ ಎಂದು ದಿಗ್ವಿಜಯ್ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿ ‘ಇಡೀ ವಿಷಯವನ್ನೇ ತಿರುಗಿಸಲು ದಿಗ್ವಿಜಯ್ ಸಿಂಗ್ ಪ್ರಯತ್ನಿಸುತ್ತಿದ್ದಾರೆ. ಗಣ್ಯರ ಮೇಲೆ ಗೂಢಚರ್ಯೆ ಮಾಡುವುದು ಕಾಂಗ್ರೆಸ್ ಡಿಎನ್ಎಯಲ್ಲಿಯೇ ಇದೆ. ನೇತಾಜೀ ಕುಟುಂಬದ ಮೇಲೆ ನೆಹರು ಯಾಕೆ ಗೂಢಚರ್ಯೆ ಮಾಡಿದರು ಎಂಬುದಕ್ಕೆ ಕಾಂಗ್ರೆಸ್ ಉತ್ತರ ಕೊಡಲಿ’ ಎಂದಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.