ರಾಯ್ಪುರ: ಭಾರತ ಹಲವಾರು ದೇಗುಲಗಳ, ಧಾರ್ಮಿಕ ಶ್ರದ್ಧಾಕೇಂದ್ರಗಳ ತಾಣ. ಇಂತಹ ಒಂದು ಪ್ರಸಿದ್ಧ ಪುಣ್ಯಕ್ಷೇತ್ರ ಛತ್ತೀಸ್ಗಢದಲ್ಲಿನ ಗರಿಯಾಬಂದ್ ಜಿಲ್ಲೆಯ ಮರೊಡ ಗ್ರಾಮದಲ್ಲಿದೆ.
ಈ ಗ್ರಾಮದಲ್ಲಿ ವಿಶ್ವದ ಅತೀದೊಡ್ಡ ಪ್ರಾಕೃತಿಕ ಶಿವಲಿಂಗವಿದೆ. ಭೂತೇಶ್ವರ ಮಹಾದೇವ್ ಭಾಕುರ ಎಂದು ಈ ಶಿವನಿಗೆ ಹೆಸರು. ಈ ಸ್ಥಳ ‘ಭೂತೇಶ್ವರನಾಥ ಧಾಮ’ ಎಂದು ಪ್ರಸಿದ್ಧಿ ಪಡೆದಿದೆ.
ವಿಸ್ಮಯ ಎಂದರೆ ವರ್ಷಕ್ಕೆ ಏಳದಿಂದ 8 ಇಂಚಿನಷ್ಟು ಎತ್ತರಕ್ಕೆ ಈ ಶಿವಲಿಂಗ ಬೆಳೆಯುತ್ತದೆ. ಇದೀಗ ಇದರ ಎತ್ತರ 18 ಫೀಟ್ ಮತ್ತು ಅಗಲ 20 ಫೀಟ್ ಇದೆ. ಪ್ರತಿ ಶ್ರಾವಣಕ್ಕೆ ದೇಶದಾದ್ಯಂತದಿಂದ ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಒಂದು ಕೊಡ ನೀರಿನಿಂದ ಈ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ ಮನದ ಇಚ್ಛೆ ನೆರೆವೇರುತ್ತದೆ ಎಂಬುದು ಭಕ್ತರ ನಂಬಿಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.