ಕೋಲ್ಕತ್ತಾ: 6ನೇ ಶತಮಾನಕ್ಕೆ ಸೇರಿದ ರಾಮಾಯಣದ ಹಸ್ತಪ್ರತಿಯೊಂದು ಕೋಲ್ಕತ್ತಾದಲ್ಲಿ ಪತ್ತೆಯಾಗಿದೆ.
ಕೋಲ್ಕತ್ತಾದಲ್ಲಿನ ಸಂಸ್ಕೃತ ಸಾಹಿತ್ಯ ಪರಿಷದ್ನ ಸಂಸ್ಕೃತ ಲೈಬ್ರರಿಯ ಪುರಾಣದಲ್ಲಿ ಈ ಗ್ರಂಥ ಸಿಕ್ಕಿದೆ. ಇದು ನೂರು ವರ್ಷ ಹಳೆಯ ಸಂಶೋಧನ ಸಂಸ್ಥೆಯಾಗಿದೆ. ವನ್ಹಿ ಪುರಾಣಕ್ಕಾಗಿ ಶೋಧನೆ ನಡೆಸುತ್ತಿದ್ದ ವೇಳೆ ವಿದ್ವಾಂಸರಿಗೆ ಲೈಬ್ರರಿಯಲ್ಲಿ ಈ ರಾಮಾಯಣ ದೊರೆತಿದೆ.
4ನೇ ಶತಮಾನದಲ್ಲಿ ವಾಲ್ಮೀಕಿ ರಾಮಾಯಣಕ್ಕಿಂತ ಇದು ತುಸು ಭಿನ್ನವಾಗಿದೆ. ಅದರಲ್ಲಿ 7 ಕಾಂಡಗಳಿದ್ದರೆ, ಇದೀಗ ದೊರೆತಿರುವ ರಾಮಾಯಣದಲ್ಲಿ 5 ಕಾಂಡಗಳು ಮಾತ್ರ ಇವೆ. ಇದರ ಒಂದು ಪ್ರತಿ ಲಂಡನ್ನಲ್ಲಿನ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿ ಇರಬಹುದು ಎಂಬ ಅನುಮಾಣವನ್ನು ವಿದ್ವಾಂಸರು ವ್ಯಕ್ತಪಡಿಸಿದ್ದಾರೆ.
ಈ ಗ್ರಂಥದಲ್ಲಿ ರಾಮನನ್ನು ದೇವರ ಬದಲಾಗಿ ಮನುಷ್ಯನಂತೆ ಬಿಂಬಿಸಲಾಗಿದೆ, ಮದುವೆಯ ಸಂದರ್ಭದಲ್ಲಿ ರಾಮ ಸೀತೆಯರ ವಯಸ್ಸು, ಸೀತೆ ರಾವಣನಿಂದ ಅಪಹರಿಸಲ್ಪಟ್ಟ ಸಮಯ ಎಲ್ಲವೂ ಇದರಲ್ಲಿ ಇದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.