ನವದೆಹಲಿ: ಅಲ್ಖೈದಾ ಸಂಘಟನೆಯ ಉಗ್ರರಿಗೆ ಆಶ್ರಯ ನೀಡಿದ ಆರೋಪದ ಮೇರೆಗೆ ಮದರಸದ ಗುರುವೊಬ್ಬನನ್ನು ಒರಿಸ್ಸಾದಲ್ಲಿ ಬಂಧನಕ್ಕೊಳಪಡಿಸಲಾಗಿದೆ.
ಆರೋಪಿಯನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಈತ ೨೦೦೭ರಲ್ಲಿ ಗ್ಲಾಸ್ಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದ ಆರೋಪಿಯೋರ್ವನ ಸಂಬಂಧಿಕ ಎಂದು ತನಿಖೆಯಿಂದ ತಿಳಿದು ಬಂದಿದೆ.
ಉತ್ತರಪ್ರದೇಶದಲ್ಲಿ ನೆಲೆಸಿದ್ದಾಗ ರೆಹಮಾನ್ಗೆ ಇಬ್ಬರು ಅಲ್ಖೈದಾಗೆ ಸೇರಿದ್ದ ಪಾಕಿಸ್ಥಾನಿ ಪ್ರಜೆಗಳ ಪರಿಚಯವಾಯಿತು, ಈತ ಅವರಿಗೆ ಯುಪಿ ಮತ್ತು ತನ್ನ ಮೂಲ ಊರು ಕಟಕ್ನಲ್ಲಿ ನೆಲೆ ನಿಲ್ಲಲು ಸಹಕರಿಸಿದ್ದ. ಆದರೆ ಎನ್ಕೌಂಟರ್ವೊಂದರಲ್ಲಿ ಈ ಇಬ್ಬರನ್ನೂ ಹತ್ಯೆ ಮಾಡಲಾಗಿದ್ದು, ಆ ಬಳಿಕ ರೆಹಮಾನ್ ಭೂಗತನಾಗಿದ್ದ.
ಇದೀಗ ಈತ ಮದರಸವೊಂದರಲ್ಲಿ ಪಾಠ ಮಾಡುತ್ತಾ ಕಟಕ್ನಲ್ಲಿ ನೆಲೆಸಿದ್ದ, ಮಾಹಿತಿ ಪಡೆದುಕೊಂಡ ವಿಶೇಷ ತನಿಖಾ ದಳ ಆತನನ್ನು ಬಂಧನಕ್ಕೊಳಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.