ವಿಶ್ವಸಂಸ್ಥೆ: ಭಯೋತ್ಪಾದನೆಯನ್ನು ಪ್ರಚೋದಿಸುವ ಲಕ್ಷಾಂತರ ಸಂದೇಶಗಳನ್ನು ಪ್ರತಿ ವಾರ ಫೇಸ್ಬುಕ್ ಬ್ಲಾಕ್ ಮಾಡುತ್ತಿದೆ ಎಂದು ವಿಶ್ವಸಂಸ್ಥೆ ಭಯೋತ್ಪಾದನಾ ತಡೆ ಸಮಿತಿಯ ಜೀನ್ ಪೌಲ್ ಮಬೊರ್ಡೆ ತಿಳಿಸಿದ್ದಾರೆ.
ಉಗ್ರ ಸಂಘಟನೆಗಳಿಗಿಂತಲೂ ಶರವೇಗದಲ್ಲಿ ನಾವು ಸೋಶಲ್ ನೆಟ್ವರ್ಕ್ ಸೈಟ್ಗಳನ್ನು ಅರಿತುಕೊಳ್ಳವ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದ ಅವರು, ಜನರ ಆನ್ಲೈನ್ ಪ್ರೈವೆಸಿಯನ್ನು ಕಾಪಾಡುವುದು ಮತ್ತು ನಾಗರಿಕರನ್ನು ರಕ್ಷಿಸುವುದು ದೊಡ್ಡ ಸವಾಲು ಎಂದಿದ್ದಾರೆ.
ಇಸಿಸ್ನಂತಹ ಉಗ್ರ ಸಂಘಟನೆಗಳನ್ನು ದಮನಿಸುವುದು ನಮ್ಮ ಅತೀ ಮುಖ್ಯ ಕಾರ್ಯವಾಗಿದೆ. ಫೇಸ್ಬುಕ್, ಟ್ವಿಟರ್, ಮೈಕ್ರೋಸಾಫ್ಟ್, ಗೂಗಲ್ಗಳು ಇದಕ್ಕೆ ಸಹಕಾರ ನೀಡಬೇಕು. ಯೂಟ್ಯೂಬ್ ಈಗಾಗಲೇ ಭಯೋತ್ಪಾದನೆಯ ಪರವಾದ 14 ಮಿಲಿಯನ್ ವೀಡಿಯೋಗಳು ತೆಗೆದು ಹಾಕಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.