ನವದೆಹಲಿ: ಭಾರತ ಗ್ರಾಹಕ ಎಲೆಕ್ಟ್ರಾನಿಕ್ ಸಂಸ್ಥೆ ಮೈಕ್ರೋಮ್ಯಾಕ್ಸ್ ಇನ್ಫಾರ್ಮೆಟಿಕ್ 2018 ರಿಂದ ತನ್ನ ಫೋನುಗಳನ್ನು ಭಾರತದಲ್ಲೇ ಉತ್ಪಾದಿಸಲು ನಿರ್ಧರಿಸಿದೆ ಎಂದು ಅದರ ಸಹ ಸಂಸ್ಥಾಪಕ ರಾಹುಲ್ ಶರ್ಮಾ ತಿಳಿಸಿದ್ದಾರೆ.
ಪ್ರಸ್ತುತ ಮೈಕ್ರೋಮ್ಯಾಕ್ಸ್ನ 2ನೇ 3ರಷ್ಟು ಉತ್ಪನ್ನಗಳು ಭಾರತದಲ್ಲಿ ಮಾರಾಟವಾಗುತ್ತಿದೆ. ಇದೀಗ ಅದರ ಉತ್ಪಾದನೆ ಚೀನಾದಿಂದ ಭಾರತಕ್ಕೆ ಶಿಫ್ಟ್ ಆಗುತ್ತಿದೆ. ಹೀಗಾಗಿ ಕಡಿಮೆ ಬೆಲೆಗೆ ಅದು ಭಾರತೀಯರಿಗೆ ಸಿಗಲಿದೆ.
ಸ್ಯಾಮ್ಸಂಗ್ ಬಳಿಕ ಮೈಕ್ರೋಮ್ಯಾಕ್ಸ್ ಎರಡನೇ ಅತೀದೊಡ್ಡ ಸ್ಮಾರ್ಟ್ಫೋನ್ ಮಾರಾಟವನ್ನು ಹೊಂದಿದೆ. ಇದು ವಿಶ್ವದ ಮೂರನೇ ಅತೀದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯನ್ನು ಹೊಂದಿದೆ.
ಎಲೆಕ್ಟ್ರಾನಿಕ್ ಉತ್ಪಾದನೆಗಳನ್ನು ಭಾರತದಲ್ಲಿ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಇದರಿಂದ ಉದ್ಯೋಗ ವೃದ್ಧಿಸುವ ಪ್ರಯತ್ನ ಅವರದ್ದು. ಇದೀಗ ಮೈಕ್ರೋಮ್ಯಾಕ್ಸ್ ಕೂಡ ಮೇಕ್ ಇನ್ ಇಂಡಿಯಾಗೆ ಕೈಜೋಡಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.