ಹೈದರಾಬಾದ್: ಅಖಿಲ ಭಾರತ ವೈದ್ಯಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಇದರ ಶಂಕುಸ್ಥಾಪನೆ ಡಿ.19ರಂದು ಮಂಗಳಗಿರಿಯ ಟಿ.ಬಿ. ಸೆನೆಟೋರಿಯಂನಲ್ಲಿ ನಡೆಯಲಿದೆ. ಆಂಧ್ರ ಪ್ರದೇಶದ ನವುಲೂರು ಪಂಚಾಯತ್ ಪ್ರದೇಶದಲ್ಲಿ ಈ ಕೇಂದ್ರ ಇದೆ.
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು, ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಭೂ ಸಂಬಂಧಿತ ವಿವಾದಗಳಿಂದಾಗಿ ಸಮಾರಂಭವು ಎರಡು ಬಾರಿ ವಿಳಂಬವಾಗಿತ್ತು. ಏಮ್ಸ್ಗೆ ನಿಗದಿಪಡಿಸಲಾಗಿರುವ 193 ಎಕರೆ ಪ್ರದೇಶದಲ್ಲಿ 50 ಎಕರೆ ಎನ್ಡಿಆರ್ಎಫ್ ಹಾಗೂ 30 ಎಕರೆ ಎನ್ಐಡಿ ಸಂಸ್ಥೆಗಳು ಹೊಂದಿದ್ದು ಇನ್ನುಳಿದ 100 ಎಕರೆಗಳಷ್ಟು ಪ್ರದೇಶವನ್ನು ಏಮ್ಸ್ ಹೊಂದಲಿದೆ.
ಈ ಮಧ್ಯೆ ಮಂಗಳಗಿರಿಯ ಏಮ್ಸ್ಗಾಗಿ 1,618 ಕೋಟಿ ಮಂಜೂರು ಮಾಡಲಾಗಿದ್ದು, ಇದರಲ್ಲಿ 900 ಹಾಸಿಗೆಗಳು ಇರಲಿವೆ ಎಂದು ಆರೋಗ್ಯ ಸಚಿವ ಕಮಿನೇನಿ ಶ್ರೀನಿವಾಸ್ ಹೇಳಿದ್ದಾರೆ. ಏಮ್ಸ್ ಒಂದು ತರಬೇತಿ ಸಂಸ್ಥೆಯಾಗಿದ್ದು, ೧೦೦ ವಿದ್ಯಾರ್ಥಿಗಳು ತರಬೇತಿ ಪಡೆಯಲಿದ್ದಾರೆ. ಸಂಸ್ಥೆಯು R&D ಕೇಂದ್ರ, ಸಾರ್ವಜನಿಕ ಆರೋಗ್ಯ ಕೇಂದ್ರ,ರೆ ವೈದ್ಯಕೀಯ ಸಹಾಯಕ ಕೇಂದ್ರ ಹೊಂದಲಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.