ನ್ಯೂಯಾರ್ಕ್: 2015ರ ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದೆ. 144 ದೇಶಗಳ ಪಟ್ಟಿಯಲ್ಲಿ ಭಾರತ 95ನೇ ಸ್ಥಾನವನ್ನು ಪಡೆದುಕೊಂಡಿದೆ.
ಪಟ್ಟಿಯಲ್ಲಿ ಡೆನ್ಮಾರ್ಕ್ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಅಮೆರಿಕ 22ನೇ ಸ್ಥಾನಕ್ಕೆ ಇಳಿದಿದೆ. 2009ರಲ್ಲಿ ಇದು ಎರಡನೇ ಸ್ಥಾನದಲ್ಲಿತ್ತು. ವಿತ್ತೀಯ ಸ್ವಾತಂತ್ರ್ಯ ಮತ್ತು ಆಡಳಿತಶಾಹಿ ಇದಕ್ಕೆ ಮುಖ್ಯಕಾರಣ ಎಂದು ಫೋರ್ಬ್ಸ್ ಹೇಳಿದೆ.
ವ್ಯವಹಾರ, ವಿತ್ತೀಯ ಸ್ವಾತಂತ್ರ್ಯ ಮತ್ತು ಭ್ರಷ್ಟಾಚಾರ, ಹಿಂಸಾಚಾರಗಳ ಸವಾಲುಗಳು ಭಾರತದ ಕಳಪೆ ಸಾಧನೆಗೆ ಕಾರಣ ಎಂದು ಫೋರ್ಬ್ಸ್ ಹೇಳಿದೆ. ಈ ಪಟ್ಟಿಯಲ್ಲಿ ಕಜಕೀಸ್ತಾನ ಮತ್ತು ಘಾನಕ್ಕಿಂತಲೂ ಭಾರತ ಹಿಂದಿದೆ.
ಪಟ್ಟಿಯಲ್ಲಿ ಪಾಕಿಸ್ಥಾನ 103ನೇ ಸ್ಥಾನ ಪಡೆದಿದ್ದು, ಬಾಂಗ್ಲಾದೇಶ 121ನೇ ಸ್ಥಾನ ಪಡೆದಿದೆ. ರಷ್ಯಾ 81ನೇ ಸ್ಥಾನ ಪಡೆದಿದೆ. ಚೀನಾ 94ನೇ ಸ್ಥಾನ ಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.