ನವದೆಹಲಿ: ಉತ್ತಮ ಸೌಲಭ್ಯಗಳೊಂದಿಗೆ ಭಾರತೀಯ ರೈಲ್ವೆಯನ್ನು ಉನ್ನತ ದರ್ಜೆಗೆ ಏರಿಸಿ ಅದನ್ನು ಆಧುನೀಕರಣಗೊಳಿಸಲು ರೈಲ್ವೆ ಸಚಿವ ಸುರೇಶ್ ಪ್ರಭು ಬಯಸಿದ್ದಾರೆ.
ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ರೈಲುಗಳಿಗೆ ಉತ್ತಮ ಸೌಲಭ್ಯಗಳುಳ್ಳ ರೈಲು ಬೋಗಿಗಳನ್ನು ಅಳವಡಿಸುವ ಯೋಜನೆ ಹೊಂದಿರುವ ರೈಲ್ವೆ ಸಚಿವಾಲಯವು ಈಗಾಗಲೇ ವಿಶ್ವದಲ್ಲೇ ಅತಿ ಎತ್ತರದ ರೈಲು ಸೇತುವೆ ನಿರ್ಮಿಸುವ ಯೋಜನೆಯನ್ನೂ ರೂಪಿಸಿದೆ.
ಹಿಮಾಚಲ ಪ್ರದೇಶದ ಚೇನಾಬ್ ನದಿ ಮೇಲ್ಭಾಗದಲ್ಲಿ 359 ಮೀಟರ್ ಎತ್ತರದ ಸೇತುವೆ ನಿರ್ಮಾಣ ಕಾರ್ಯಾರಂಭವಾಗಿದ್ದು ಇದು ಪ್ಯಾರಿಸ್ನ ಐಫೆಲ್ ಟವರ್ಗಿಂತಲೂ 35 ಮೀಟರ್ ಎತ್ತರದ ಸೇತುವೆ ಆಗಲಿದೆ. ರೈಲ್ವೆ ಸಚಿವಾಲಯವು ನಿರ್ಮಾಣದ ನಕಾಶೆಯನ್ನು ಬಿಡುಗಡೆ ಮಾಡಿದೆ.
ಮುಂಬರುವ 2016-17ನೇ ಸಾಲಿನ ರೈಲ್ವೆ ಬಜೆಟ್ನಲ್ಲಿ ಸಾರ್ವಜನಿಕರ ಸಲಹೆ ಮತ್ತು ಪರಿಕಲ್ಪನೆಗಳನ್ನು ಸೇರಿಸಲು ಆಹ್ವಾನಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.