ಪುಣೆ: ಇಸಿಸ್ ಉಗ್ರ ಸಂಘಟನೆಯ ಬಗ್ಗೆ ಒಲವು ಹೊಂದಿದ್ದ, ಸಿರಿಯಾಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಪುಣೆ ಮೂಲದ 16 ವರ್ಷದ ಬಾಲಕಿಯೊಬ್ಬಳನ್ನು ಪುಣೆಯ ಭಯೋತ್ಪಾದನ ನಿಗ್ರಹ ದಳ(ಎಟಿಎಸ್) ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆಕೆಯ ಮನಸ್ಥಿತಿಯನ್ನು ಬದಲಾಯಿಸಲು ಮುಂದಾಗಿದ್ದಾರೆ.
ತನ್ನ ವಿದೇಶಿ ಸಂಪರ್ಕಗಳಿಂದ ಇಸಿಸ್ನತ್ತ ಪ್ರೇರಿತಳಾದ ಈಕೆ ಶ್ರೀಲಂಕಾ ಸೇರಿದಂತೆ ವಿವಿಧ ದೇಶದ ಇಸಿಸ್ ವಾದಿಗಳ ಜೊತೆಗೆ ಫೇಸ್ಬುಕ್, ಟ್ವಿಟರ್, ಟಿಲಿಗ್ರಾಂ, ಇಮೇಲ್ ಮುಖಾಂತರ ಮಾತುಕತೆ ನಡೆಸುತ್ತಿದ್ದಳು. ಇಸಿಸ್ ಬಗ್ಗೆ ವೆಬ್ ಸರ್ಚ್ ಕೂಡ ಮಾಡುತ್ತಿದ್ದಳು. ಇದರಿಂದಾಗಿ ಭಯೋತ್ಪಾದನ ನಿಗ್ರಹ ದಳ ಕಳೆದ 5 ತಿಂಗಳಿನಿಂದ ಈಕೆಯ ಮೇಲೆ ನಿಗಾ ಇಟ್ಟಿತ್ತು.
ರಾಜಸ್ಥಾನದಲ್ಲಿ ಇತ್ತೀಚಿಗೆ ಅರೆಸ್ಟ್ ಆದ ಕರ್ನಾಟಕ ಸಿರಾಜುದ್ದೀನ್ ಜೊತೆಗೂ ಈಕೆಗೆ ಸಂಪರ್ಕವಿತ್ತು, ನೀನು ಸಿರಿಯಾಗೆ ತೆರಳಿದ ಬಳಿಕ ನಿನ್ನ ಶಿಕ್ಷಣಕ್ಕೆ ನಾವು ಫಂಡ್ ಮಾಡುತ್ತೇವೆ ಎಂದು ಆತ ಈಕೆಗೆ ಭರವಸೆಯನ್ನೂ ನೀಡಿದ್ದ. ಇವರ ಮಾತುಕತೆಯನ್ನು ಎಟಿಎ ರೆಕಾರ್ಡ್ ಮಾಡಿಟ್ಟಿದೆ.
’ಕಳೆದ 4 ತಿಂಗಳಿನಿಂದ ಆಕೆಯ ಮನೋಭಾವದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಜೀನ್ಸ್ ಹಾಕುವುದನ್ನು ತೊರೆದು ಬುರ್ಖಾ ಮತ್ತು ಹಿಜಬ್ ಧರಿಸುತ್ತಿದ್ದಾಳೆ, ದೇಶವನ್ನು ತೊರೆದು ಸಿರಿಯಾಗೆ ಹೋಗಿ ಇಸಿಸ್ ಸೇರಲು ಮುಂದಾಗಿದ್ದಾಳೆ. ಅಲ್ ಝಝೀರ ಚಾಲೆನ್ನಲ್ಲಿ ಪ್ರಸಾರವಾದ ಇಸಿಸ್ ಬಗೆಗಿನ ಸಾಕ್ಷ್ಯಚಿತ್ರ ನೋಡಿ ಆಕೆ ಆಕರ್ಷಿತಳಾಗಿದ್ದಳು, ಬಳಿಕ ಆ ಚಾನೆಲ್ನ್ನು ನಿರಂತರವಾಗಿ ವೀಕ್ಷಿಸುತ್ತಿದ್ದಳು. ಬಳಿಕ ಇಸಿಸ್ ಜೊತೆ ಸಂಪರ್ಕ ಸಾಧಿಸಲು ಇಂಟರ್ನೆಟ್ ತಡಕಾಡಿದಳು. ವಿವಿಧ ದೇಶಗಳ 200 ಇಸಿಸ್ ಒಲವಿರುವವರು ಆಕೆಯ ಸಂಪರ್ಕಕ್ಕೆ ಸಿಕ್ಕರು’ ಎಂದು ಎಟಿಎಸ್ ಹೇಳಿದೆ.
ಇದೀಗ ಆಕೆಯ ಕುಟುಂಬಸ್ಥರ ಮತ್ತು ಧಾರ್ಮಿಕ ನಾಯಕರ ಸಹಾಯದಿಂದ ಆಕೆಗೆ ಡಿ-ರ್ಯಾಡಿಕಲೈಸೇಶನ್ ಪ್ರೋಗ್ರಾಂ ನೀಡಲಾಗುತ್ತಿದೆ. ಈ ಅಪ್ರಾಪ್ತ ಬಾಲಕಿಯನ್ನು ಉಗ್ರ ಮನಸ್ಥಿತಿಯಿಂದ ಹೊರ ಬರುವಂತೆ ಮಾಡುವುದು ನಮ್ಮ ಉದ್ದೇಶ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.