ನವದೆಹಲಿ: ಭಾರತ ಮತ್ತು ಅಮೇರಿಕ ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಭಯೋತ್ಪಾದಕ ವೀಕ್ಷಣಾ ಪಟ್ಟಿ ಮಾಹಿತಿ ವಿಸ್ತರಣೆಯ ಒಪ್ಪಂದ ಮಾಡಿಕೊಂಡಿವೆ.
ಸೆಪ್ಟೆಂಬರ್ 22ರಂದು ವಾಷಿಂಗ್ಟನ್ನಲ್ಲಿ ನಡೆದ ಮೊದಲ ಭಾರತ-ಅಮೇರಿಕ ನಡುವಿನ ವಾಣಿಜ್ಯ ಮಂತ್ರಿಗಳ ಮಾತುಕತೆ ಸಂದರ್ಭದಲ್ಲಿ ಭಯೋತ್ಪಾನೆ ವಿರುದ್ಧ ಜಂಟಿ ಹೋರಾಟ ಮತ್ತು ಮಾಹಿತಿ ಹಂಚಿಕೆಯ ಘೋಷಣೆ ಹೊರಡಿಸಲಾಗಿತ್ತು ಎಂದು ರಾಜ್ಯ ಗೃಹ ಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿ ತಿಳಿಸಿದ್ದಾರೆ.
ಭಯೋತ್ಪಾದನಾ ನಿಗ್ರಹ ಸಹಕಾರ ವೃದ್ಧಿಸಲು ಹಲವು ಸ್ಪಷ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತ ಮತ್ತು ಅಮೇರಿಕ ಸರ್ಕಾರಗಳು ಗುಪ್ತಚರ ಹಂಚಿಕೆ ಮತ್ತು ಭಯೋತ್ಪಾದಕ ವೀಕ್ಷಣಾ ಪಟ್ಟಿ ಮಾಹಿತಿ ವಿಸ್ತರಿಸಲು ಒಪ್ಪಂದ ಮಾಡಿಕೊಂಡಿವೆ ಎಂದು ಲೋಕಸಭೆಗೆ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತೆ ಹಾಗೂ ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ನೀಡಲು ಚೌಧರಿ ನಿರಾಕರಿಸಿದ್ದಾರೆ. ಜಾಗತಿಕ ಭಯೋತ್ಪದನಾ ಸೂಚ್ಯಂಕ 2015ರ ಪ್ರಕಾರ 2014ರಿಂದ ಈವರೆಗೆ ಜಗತ್ತಿನಾದ್ಯಂತ ಭಯೋತ್ಪಾದನೆಯಿಂದಾಗುವ ಸಾವುಗಳ ಪ್ರಮಾಣ ಶೇ.80ರಷ್ಟು ಹೆಚ್ಚಾಗಿದ್ದರೆ, ಭಾರತದಲ್ಲಿ ಶೇ.1ರಷ್ಟು ಮಾತ್ರ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 2014ರಲ್ಲಿ 53 ಮಂದಿ ಸಾವನ್ನಪ್ಪಿದ್ದರೆ, ಮಾವೋವಾದಿ ಹಿಂಸಾಚಾರದಲ್ಲಿ 309 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಒಟ್ಟಾರೆಯಾಗಿ ಭಾರತದಲ್ಲಿ ಸುರಕ್ಷತಾ ಕ್ರಮಗಳು ನಿಯಂತ್ರಣದಲ್ಲಿ ಇದೆ ಎಂದು ಚೌಧರಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.