ನವದೆಹಲಿ: ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಭಾರತ ಯಶಸ್ಸನ್ನು ಕಾರಣುತ್ತಿದ್ದು, ವಿಶೇಷ ದಳ ಮತ್ತೋರ್ವ ಅಲ್ಖೈದಾ ಉಗ್ರನನ್ನು ಬಂಧಿಸಿದೆ. ಕಳೆದ ಎರಡು ದಿನಗಳಲ್ಲಿ ನಡೆದ ಮೂರನೇ ಬಂಧನ ಇದಾಗಿದೆ.
ಬಂಧಿತ ಉಗ್ರನನ್ನು ಜಾಫರ್ ಮಸೂದ್ ಎಂದು ಗುರುತಿಸಲಾಗಿದ್ದು, ಸಂಬಲ್ನಲ್ಲಿ ಬುಧವಾರ ರಾತ್ರಿ ಬಂಧಿಸಲಾಗಿದೆ, ಈತ ಅಲ್ಖೈದಾ ಸಂಘಟನೆಯ ಹಣಕಾಸು ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ, ೧೯೯ರಲ್ಲಿ ಪಾಕಿಸ್ಥಾನದಲ್ಲಿ ಉಗ್ರ ತರಬೇತಿ ಪಡೆದಿದ್ದ ಎನ್ನಲಾಗಿದೆ.
ಮೊನ್ನೆಯಷ್ಟೇ ವಿಶೇಷ ದಳ ಆಸೀಪ್ ಮತ್ತು ಮೊಹಮ್ಮದ್ ಅಬ್ದುಲ್ ರೆಹಮಾನ್ ಎಂಬ ಇಬ್ಬರು ಅಲ್ಖೈದಾ ಸದಸ್ಯರನ್ನು ದೆಹಲಿ ಮತ್ತು ಕಟಕ್ನಲ್ಲಿ ಬಂಧನಕ್ಕೊಳಪಡಿಸಿತ್ತು.
ಈ ಮೂವರು ಭಾರತೀಯರೇ ಆಗಿದ್ದು, ಪಾಕಿಸ್ಥಾನದಲ್ಲಿ ಉಗ್ರ ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.