ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಡಿ.23ರಿಂದ ಐದು ದಿನಗಳ ಕಾಲ ಆಯುಥ ಮಹಾ ಚಂಡಿಯಾಗವನ್ನು ನಡೆಸಲಿದ್ದಾರೆ. ತೆಲಂಗಾಣದ ಒಳಿತಿಗಾಗಿ ಈ ಯಾಗ ನಡೆಯಲಿದೆ.
ಮೇಧಕ್ ಜಿಲ್ಲೆಯ ಎರವೆಲ್ಲಿನಲ್ಲಿರುವ ಕೆಸಿಆರ್ ಅವರ ಫಾರ್ಮ್ ಹೌಸ್ನಲ್ಲಿ ಈ ಯಾಗ ನಡೆಯಲಿದ್ದು, ಬರೋಬ್ಬರಿ 1,500 ಪುರೋಹಿತರು ಇದರಲ್ಲಿ ಭಾಗಿಯಾಗಲಿದ್ದಾರೆ. 150 ಅಡುಗೆ ಭಟ್ಟರು 50 ಸಾವಿರ ಜನರಿಗೆ ಐದು ದಿನಗಳ ಕಾಲ ಅಡುಗೆ ಮಾಡಲಿದ್ದಾರೆ.
ಈ ಯಾಗದ ಖರ್ಚುವೆಚ್ಚದ ಹೊಣೆ ಸಂಪೂರ್ಣ ನನ್ನದು ಎಂದು ಕೆಸಿಆರ್ ಸ್ಪಷ್ಟಪಡಿಸಿದ್ದಾರೆ. ಖಾಸಗಿ ವಲಯದಿಂದ ಪ್ರಾಯೋಜಕತ್ವ ಪಡೆಯಲಿದ್ದಾರೆ. 3 ಕೋಟಿ ರೂಪಾಯಿಗಳು ಇದಕ್ಕೆ ಖರ್ಚಾಗಲಿದೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೆಲವೊಂದು ಗವರ್ನರ್ಗಳನ್ನು ಯಾಗಕ್ಕೆ ಆಹ್ವಾನಿಸಿದ್ದಾರೆ.
ಬುಧವಾರ ಕೆಸಿಆರ್ ಶೃಂಗೇರಿಗೆ ಆಗಮಿಸಿ ಶಾರದಾ ಮಾತೆಯ ದರ್ಶನ ಪಡೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.