ನವದೆಹಲಿ: ಕಾರಿನ ದೋಷಪೂರಿತ ಕ್ಲಚ್ ಪೆಡಲ್ ಲೀವರ್ಗಳನ್ನು ಬದಲಾಯಿಸುವ ಸಲುವಾಗಿ ಜನರಲ್ ಮೋಟಾರ್ಸ್ ಇಂಡಿಯಾ ಡಿ.2010ರಿಂದ ಜುಲೈ 2014ರ ನಡುವೆ ಉತ್ಪಾದಿಸಿದ ಷೆವರ್ಲೆ ಬೀಟ್ ಡೀಸೆಲ್ ಕಾರುಗಳನ್ನು ಹಿಂಪಡೆಯಲಿದೆ ಎಂದು ತಿಳಿಸಿದೆ.
ಮೊದಲು ದೋಷಪೂರಿತ ಕಾರುಗಳನ್ನು ಪರಿಶೀಲನೆ ನಡೆಸುತ್ತೇವೆ, ಅಗತ್ಯಬಿದ್ದರೆ ಷೆವರ್ಲೆ ಬೀಟ್ ಡೀಸೆಲ್ನ 1,01,567 ಯುನಿಟ್ಗಳ ಕ್ಲಚ್ ಪೆಡಲ್ ಲೀವರ್ಗಳನ್ನು ಬದಲಾಯಿಸಲಿದ್ದೇವೆ ಎಂದು ಕಂಪೆನಿ ತಿಳಿಸಿದೆ.
ಕಂಪೆನಿಯು ಸ್ವಯಂಪ್ರೇರಣೆಯಿಂದ ಬೀಟ್ ಡೀಸೆಲ್ ಕಾರುಗಳ ಮಾಲೀಕರನ್ನು ಗುರುತಿಸಿ ಅವರಿಗೆ ತಮ್ಮ ಕಾರುಗಳನ್ನು ಸಮೀಪದ ಷೆವರ್ಲೆ ಸೇವಾ ಕೇಂದ್ರಕ್ಕೆ ತರುವಂತೆ ಸೂಚಿಸಲಿದೆ. ಭಾರತದಾದ್ಯಂತ 248 ಷೆವರ್ಲೆ ಕೇಂದ್ರಗಳಿವೆ ಎಂದು ಜನರಲ್ ಮೋಟಾರ್ಸ್ ಹೇಳಿದೆ. ಕಾರುಗಳ ದೀರ್ಘ ಬಳಕೆಯಿಂದ ಅವುಗಳ ಕ್ಲಚ್ ಪೆಡಲ್ ಲೀವರ್ ಮುರಿಯುವ ಸಾಧ್ಯತೆಗಳಿವೆ. ಆದ್ದರಿಂದ ಅವುಗಳ ಪರಿಶೀಲನೆ ಅಗತ್ಯ ಎಂದಿದೆ.
ಈ ಕ್ರಮದ ಅಂಗವಾಗಿ ಗ್ರಾಹಕರು ತಮ್ಮ ಸಮೀಪದ ಷೆವರ್ಲೆ ಮಾರಾಟಗಾರರನ್ನು ಸಂಪರ್ಕಿಸಿ ವಾಹನ ತಪಾಸಣೆ ನಡೆಸಬಹುದಾಗಿದೆ ಎಂದು ಹೇಳಿದೆ.
ಕಳೆದ 2013ರಲ್ಲಿ ಷೆವರ್ಲೆ ಕಂಪೆನಿ 2005ರಿಂದ 2013ರ ನಡುವೆ ಉತ್ಪಾದಿಸಿದ್ದ ಸುಮಾರು 1.14 ಲಕ್ಷ ಬಹುಪಯೋಗಿ ಟವೇರಾ ವಾಹನಗಳ ಹೊರಸೂಸುವಿಕೆ ಪರೀಕ್ಷೆ ನಡೆಸಲು ಕಾರುಗಳನ್ನು ಹಿಂಪಡೆದಿದೆ. ಕಳೆದ ವಾರ ಜಪಾನ್ನ ಹೋಂಡಾ ಕಂಪೆನಿ ಡಿಸೆಂಬರ್ 2013ರಿಂದ ಜುಲೈ 2015ರ ನಡುವೆ ಉತ್ಪಾದಿಸಿದ್ದ ಸೆಡಾನ್ ಸಿಟಿ ಹಾಗೂ ಮೊಬಿಲಿಯೋ ಕಾರುಗಳ ಇಂಧನ ಪೈಪ್ ಬದಲಾಯಿಸಲು 90,210 ಕಾರುಗಳನ್ನು ಹಿಂಪಡೆದಿದೆ.
ಇಂಧನ ಹೊರಸೂಸುವಿಕೆ ಪರೀಕ್ಷೆ ಹಗರಣದಿಂದಾಗಿ ವೋಕ್ಸ್ವ್ಯಾಗನ್ ಗ್ರೂಪ್ ಈ ಹಿಂದೆ ತನ್ನ ಸ್ಕೋಡಾ, ಆಡಿ, ವೋಕ್ಸ್ವ್ಯಾಗನ್ನ ಸುಮಾರು 3,23,700 ಕಾರುಗಳನ್ನು ಹಿಂಪಡೆದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.