ವಾಷಿಂಗ್ಟನ್: ಕೇಂದ್ರ ಸರ್ಕಾರದ ಮಹತ್ವದ ಸ್ವಚ್ಛ ಭಾರತ ಅಭಿಯಾನಕ್ಕೆ ವಿಶ್ವಬ್ಯಾಂಕ್ 10 ಸಾವಿರ ಕೋಟಿ ರೂಪಾಯಿ ಸಾಲ ಮಂಜೂರು ಮಾಡಿದೆ. ಗ್ರಾಮೀಣ ಭಾಗವನ್ನು ಸಂಪೂರ್ಣ ಬಯಲು ಶೌಚಾಲಯ ಮುಕ್ತವನ್ನಾಗಿಸುವ ಕೇಂದ್ರದ ಮಹತ್ವಕಾಂಕ್ಷೆಗೆ ಈ ಸಾಲ ಸಹಾಯಕವಾಗಲಿದೆ.
ವಿಶ್ವಬ್ಯಾಂಕ್ ಅಂಕಿಅಂಶಗಳ ಪ್ರಕಾರ, ಜಾಗತಿಕವಾಗಿ ಒಟ್ಟು 2.4 ಲಕ್ಷ ಮಂದಿ ನೈರ್ಮಲ್ಯದಿಂದ ದೂರಹೊಂದಿದ್ದಾರೆ. ಇದರಲ್ಲಿ 750 ಮಿಲಿಯನ್ ಮಂದಿ ಭಾರತದಲ್ಲೇ ಇದ್ದಾರೆ. ಇದರಲ್ಲಿ ಶೇ.80ರಷ್ಟು ಮಂದಿ ಗ್ರಾಮೀಣ ಭಾಗದಲ್ಲಿದ್ದಾರೆ.
‘ಭಾರತದಲ್ಲಿ ಸಂಭವಿಸುವ ಪ್ರತಿ 10 ಸಾವುಗಳಲ್ಲಿ 1 ಸಾವು ಕಳಪೆ ನೈರ್ಮಲ್ಯದಿಂದ ಕೂಡಿದ್ದಾಗಿರುತ್ತದೆ. ಕಡಿಮೆ ಆದಾಯ ಇರುವ ಕುಟುಂಬಗಳು ಕಳಪೆ ನೈರ್ಮಲ್ಯದಿಂದ ಹೆಚ್ಚು ಸಂಕಷ್ಟಕ್ಕೀಡಾಗುತ್ತಿವೆ ಎಂದು ಅಂಕಿಅಂಶಗಳಿಂದ ತಿಳಿದು ಬರುತ್ತದೆ’ ಎಂದು ವಿಶ್ವಬ್ಯಾಂಕ್ನ ಭಾರತದ ನಿರ್ದೇಶಕ ಒನ್ನೋ ರಾಹುಲ್ ತಿಳಿಸಿದ್ದಾರೆ.
ಸರ್ಕಾರದ ಸ್ವಚ್ಛ ಭಾರತ ಅಭಿಯಾನ ನೈರ್ಮಲ್ಯವನ್ನು ಬಲಗೊಳಿಸುವ ಗುರಿಯನ್ನು ಹೊಂದಿದೆ. ಇದರಿಂದ ಬಡವರ ಆರೋಗ್ಯ ಸುಧಾರಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.