ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಕಛೇರಿಯ ಮೇಲೆ ಸಿಬಿಐ ದಾಳಿ ನಡೆದಿದೆ ಎಂದು ಆರೋಪಿಸಿ ಲೋಕಸಭೆಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಎಎಪಿ ಸಂಸದನಿಗೆ ಪ್ರಧಾನಿ ನರೇಂದ್ರ ಮೋದಿ ಕುಡಿಯಲು ನೀರು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಂಸದ ಭಗವಂತ್ ಮನ್ನ್ ಅವರು ಸದನದ ಬಾವಿಗಿಳಿದು ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಿದ್ದರು, ಕಿರುಚಾಡಿ ಕಿರುಚಾಡಿ ಸುಸ್ತಾಗಿದ್ದ ಅವರು ನೀರಿಗಾಗಿ ಅತ್ತಿತ್ತ ನೋಡುತ್ತಿದ್ದರು. ಇದನ್ನು ಗಮನಿಸಿದ ಮೋದಿ ತಮ್ಮ ಟೇಬಲ್ ಮೇಲಿದ್ದ ನೀರಿನ ಗ್ಲಾಸನ್ನು ತೆಗೆದು ಅವರಿಗೆ ನೀಡಿದರು. ಸಂಕೋಚ ಮರೆತು ಮನ್ನ್ ನೀರನ್ನು ಕುಡಿದರು. ಬಳಿಕ ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ಮಂದಹಾಸ ಬೀರಿದರು. ಬಳಿಕ ಮನ್ನ್ ತಮ್ಮ ಪ್ರತಿಭಟನೆ ಮುಂದುವರೆಸಿದರು.
ಪ್ರಧಾನಿಯ ಈ ವಿನಂಬ್ರತೆಯನ್ನು ಡೆಸ್ಕ್ ತಟ್ಟುವ ಮೂಲಕ ಹಲವಾರು ಬಿಜೆಪಿ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದರು. ಇತರ ಸದಸ್ಯರು ಕೂಡ ಇದನ್ನು ಕಂಡು ನಗು ಚಿಮ್ಮಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.