ನವದೆಹಲಿ: ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಕರ್ನಾಟಕದ AMRUT (Atal Mission for Rejuvenation and Urban Transformation) ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದು, ಇದರ 2015-16ನೇ ಸಾಲಿನ ವೆಚ್ಚಕ್ಕಾಗಿ ರೂ.1258 ಕೋಟಿಯನ್ನು ಬಿಡುಗಡೆ ಮಾಡಲಿದೆ. ರಾಜ್ಯದ 27 ನಗರಗಳು ಇದಕ್ಕೆ ಒಳಪಟ್ಟಿದೆ.
ಇದರಲ್ಲಿ ರೂ.552 ಕೋಟಿ ಯೋಜನೆಗೆ ಒಳಪಟ್ಟ ನಗರಗಳಲ್ಲಿ ನೀರು ಸರಬರಾಜನ್ನು ವೃದ್ಧಿಸಲು, 613 ಕೋಟಿ ಒಳಚರಂಡಿ ವ್ಯವಸ್ಥೆಗೆ, 49 ಕೋಟಿ ರೂ ಹೊಲಸು ಚರಂಡಿಗಳ ನಿರ್ಮಾಣಕ್ಕೆ, 28 ಕೋಟಿ ರೂ ಹಸಿರು ವಲಯ ಮತ್ತು ಪಾರ್ಕ್ ನಿರ್ಮಾಣಕ್ಕೆ, 18ಕೋಟಿ ರೂ ನಗರ ಸಾರಿಗೆಗೆ ವ್ಯಯವಾಗಲಿದೆ.
ಕರ್ನಾಟಕ ಮಾತ್ರವಲ್ಲದೇ ದೇಶ ಒಟ್ಟು 18 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಮೃತ್ ಕ್ರಿಯಾ ಯೋಜನೆಗೆ ಕೇಂದ್ರ ಹಸಿರು ನಿಶಾನೆ ತೋರಿಸಿದೆ. ಒಟ್ಟು 477ನಗರಗಳು ಇದರ ವ್ಯಾಪ್ತಿಗೆ ಬರಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.