ಕಾನ್ಪುರ: ಸದಾ ವಿವಾದಾತ್ಮಕ ನೀಡುತ್ತಾ ಜನರ ಆಕ್ರೋಶಕ್ಕೆ ತುತ್ತಾಗಿರುವ ಉತ್ತರಪ್ರದೇಶದ ಸಚಿವ ಅಜಂ ಖಾನ್ ಅವರಿಗೆ ಇದೀಗ ಪ್ರಧಾನಿಯಾಗುವ ಆಸೆ ಚಿಗುರಿದೆ. ಪ್ರಧಾನಿ ಹುದ್ದೆಗೆ ನಾನು ಅತ್ಯಂತ ಫಿಟೆಸ್ಟ್ ಪರ್ಸನ್ ಎಂದು ಅವರೇ ಹೇಳಿಕೊಂಡಿದ್ದಾರೆ.
‘ಒಂದು ವೇಳೆ ನರೇಂದ್ರ ಮೋದಿ ರಾಜೀನಾಮೆ ನೀಡಿದರೆ, ಎಲ್ಲಾ ಸಂಸದರು ಸೇರಿ ನನ್ನನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಬೇಕು, ಇದರಿಂದ ದೇಶಕ್ಕೆ ಉತ್ತಮ ಸಂದೇಶ ರವಾನಿಸಿದಂತಾಗುತ್ತದೆ ಮತ್ತು ಭಾರತ ಪ್ರಗತಿಯಾಗುತ್ತದೆ’ ಎಂದಿದ್ದಾರೆ.
ತನ್ನ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರೂ ಪ್ರಧಾನಿ ಹುದ್ದೆಗೆ ನಾನು ಅಭ್ಯರ್ಥಿಯಾಗುವುದನ್ನು ಬೆಂಬಲಿಸಲಿದ್ದಾರೆ. ಸಮಯ ಬಂದಾಗ ಅವರೇ ನನ್ನ ಹೆಸರನ್ನು ಪ್ರಸ್ತಾಪಿಸಲಿದ್ದಾರೆ ಎಂದಿದ್ದಾರೆ.
ತನಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಲಕ್ನೋದಲ್ಲಿ ಹಾಕಲಾಗಿರುವ ಪೋಸ್ಟರ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಇಂತಹ ಪೋಸ್ಟರ್ ಹಾಕುವುದು ನನಗೆ ಅವಮಾನಿಸಿದಂತೆ, ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿ ಮತ್ತು ಅದಕ್ಕೆ ನಾನು ಅರ್ಹ ವ್ಯಕ್ತಿ, ಹೀಗಾಗಿ ಉಪ ಮುಖ್ಯಮಂತ್ರಿ ಆಗಬೇಕೆಂದು ಹಾಕಲಾಗಿರುವ ನನ್ನ ಪೋಸ್ಟರ್ಗಳನ್ನು ತೆಗೆದು ಹಾಕಲು ಸೂಚಿಸಿದ್ದೇನೆ’ ಎಂದರು.
ಇತ್ತೀಚಿಗಷ್ಟೇ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತನ್ನ ತಂದೆ ಮುಲಾಯಂ ಅವರು ಪ್ರಧಾನಿಯಾಗ ಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು. ಆದರೆ ಇದೀಗ ಅಜಂ ಅವರೂ ತಾನೂ ಪ್ರಧಾನಿಯಾಗ ಬೇಕೆನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಮಾಜವಾದಿಯಲ್ಲಿ ಇಬ್ಬಿಬ್ಬರು ಪ್ರಧಾನಿ ಆಕಾಂಕ್ಷಿಗಳಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಸಚಿವ ಸ್ಥಾನದಲ್ಲಿದ್ದುಕೊಂಡೇ ದಿನಕ್ಕೊಂದು ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಅಜಂ ಖಾನ್ ಪ್ರಧಾನಿಯಾದರೆ ದೇಶದ ಸ್ಥಿತಿ ಅಧೋಗತಿಯಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.