ನವದೆಹಲಿ: ಭಾರತದ ದೇಗುಲಗಳಲ್ಲಿರುವ ಅಪಾರ ಪ್ರಮಾಣದ ಬಂಗಾರವನ್ನು ಸದ್ಭಳಕೆ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಗಳು ತಮ್ಮ ಬಳಿ ಇರುವ ಬಂಗಾರಗಳನ್ನು ಠೇವಣಿ ಇಟ್ಟರೆ ಅವುಗಳಿಗೆ ಆಕರ್ಷಕ ಬಡ್ಡಿದರವನ್ನು ನೀಡುವ ಮಹತ್ವದ ಯೋಜನೆಯೊಂದನ್ನು ಜಾರಿಗೆ ತರಲು ಅವರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇವಸ್ಥಾನಗಳು ಠೇವಣಿ ಇಡುವ ಬಂಗಾರವನ್ನು ಕರಗಿಸಿ ಅದನ್ನು ಆಭರಣ ವ್ಯಾಪಾರಿಗಳಿಗೆ ಮಾರುವ ಮೂಲಕ ಬಂಗಾರದ ಆಮದಿನಿಂದ ವಿತ್ತೀಯ ವ್ಯವಸ್ಥೆಯ ಮೇಲೆ ಬೀಳುತ್ತಿರುವ ವಿಪರೀತ ಹೊರೆಯನ್ನು ತಗ್ಗಿಸುವ ಉದ್ದೇಶ ಈ ಯೋಜನೆಯ ಹಿಂದಿದೆ.
ಈ ಯೋಜನೆಗೆ ದೇಶದ ಎರಡು ಪ್ರಮುಖ ದೇವಸ್ಥಾನಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ಒಳ್ಳೆಯ ಬಡ್ಡಿದರ ನೀಡಿದರೆ ಬಂಗಾರವನ್ನು ಬ್ಯಾಂಕಿನಲ್ಲಿ ಇಡುವ ಕುರಿತು ಚಿಂತನೆ ನಡೆಸುತ್ತೇವೆ ಎಂದು ಮುಂಬಯಿಯ ಪ್ರಸಿದ್ಧ ಸಿದ್ಧಿವಿನಾಯಕ ದೇಗುಲ ಮತ್ತು ಶಿರಿಡಿ ಸಾಯಿ ಬಾಬಾ ದೇಗುಲದ ಮಂಡಳಿ ತಿಳಿಸಿದೆ.
ಭಾರತ ಪ್ರತಿವರ್ಷ 800 ರಿಂದ 1000 ಟನ್ ಬಂಗಾರವನ್ನು ಆಮದು ಮಾಡಿಕೊಳ್ಳುತ್ತಿದೆ. ಒಂದು ವೇಳೆ ಮೋದಿಯವರ ಈ ಹೊಸ ಯೋಜನೆ ಜಾರಿಗೆ ಬಂದರೆ ಆಮದಿನ ಪ್ರಮಾಣ ಕನಿಷ್ಠ ಶೇ.25ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.