ನವದೆಹಲಿ: ನೇತಾಜಿ ಸುಭಾಷ್ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಕೆಜಿಬಿ ಕಡತಗಳನ್ನು ನೀಡುವಂತೆ ರಷ್ಯಾ ಅಧ್ಯಕ್ಷರಲ್ಲಿ ಮನವಿಮಾಡಿಕೊಳ್ಳುವಂತೆ ನೇತಾಜಿ ಕುಟುಂಬದ ಸದಸ್ಯರು ಪ್ರಧಾನಿ ಮೋದಿ ಅವರಲ್ಲಿ ಕೇಳಿಕೊಂಡಿದ್ದಾರೆ.
ನೇತಾಜಿ ಅವರ ನಿರ್ಣಾಯಕ ಪುರಾವೆಗಳನ್ನು ಪಡೆಯಲು ಕೆಜಿಬಿ ಕಡತಗಳನ್ನು ಹೊಂದುವುದು ಬಹಳ ಅಗತ್ಯ. ಪ್ರಧಾನಿಯವರ ಸಹಾಯದಿಂದಲೇ ಈ ಕಡತಗಳು ಬಹಿರಂಗಗೊಳ್ಳಲು ಸಾಧ್ಯ ಎಂದು ಚಂದ್ರ ಬೋಸ್ ತಿಳಿಸಿದ್ದಾರೆ. ಆ.18ರಂದು ತೈವಾನ್ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಸಾವನ್ನಪ್ಪಿರಲು ಸಾಧ್ಯವಿಲ್ಲ. ಅವರು ಚೀನಾ ಇಲ್ಲವೇ ಸೋವಿಯತ್ಗೆ ತೆರಳಿರಬಹುದು ಎಂದು ಅವರು ಹೇಳಿದ್ದಾರೆ.
ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾಸ್ಕೋ ಸಭೆಯ ವೇಳೆ ನೇತಾಜಿ ವಿಚಾರವನ್ನು ಎತ್ತಿದ್ದು, ಭಾರತ ಸರ್ಕಾರ ಕೂಡ ಈ ಕಡತಗಳನ್ನು ಬಹಿರಂಗಪಡಿಸಲು ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.