ಮುಂಬಯಿ: ಸಂಬಂಧಪಟ್ಟ ಆಡಳಿತದಿಂದ ಅಗತ್ಯ ಪರವಾನಗಿ ಪಡೆಯದೇ ನವಿ ಮುಂಬಯಿಗಳಲ್ಲಿನ ಮಸೀದಿಗಳಲ್ಲಿ ಅಳವಡಿಸಲಾಗಿರುವ ಲೌಡ್ ಸ್ಪೀಕರ್ಗಳನ್ನು ತೆಗೆದು ಹಾಕುವಂತೆ ಬಾಂಬೆ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.
ನವಿ ಮುಂಬಯಿ ನಿವಾಸಿ ಸಂತೋಷ್ ಪಚಲಗ್ ಎಂಬುವವರು ಸಲ್ಲಿಸಿದ್ದ ಪಿಐಎಲ್ನ್ನು ಪರಿಶೀಲಿಸಿದ ನ್ಯಾ.ವಿ.ಎಂ ಕಾನಡೆ ಮತ್ತು ಪಿ.ಡಿ.ಕೊಡೆ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ.
ನವಿ ಮುಂಬಯಿ 49 ಮಸೀದಿಗಳ ಪೈಕಿ 45 ಮಸೀದಿಗಳು ಅನಧಿಕೃತವಾಗಿ ಲೌಡ್ ಸ್ಪೀಕರ್ಗಳನ್ನು ಬಳಸುತ್ತಿದೆ, ಇವುಗಳ ಸೌಂಡ್ ಶಾಲಾ ಕಾಲೇಜು, ಆಸ್ಪತ್ರೆಗಳಿರುವ ಸೈಲೆಂಟ್ ಝೋನ್ ಪ್ರದೇಶದಲ್ಲಿ ಇರಬೇಕಾದ ಸೌಂಡ್ ಮಿತಿಗಿಂತ ಹೆಚ್ಚಾಗಿದೆ ಎಂದು ಆರ್ಟಿಐ ಮೂಲಕ ತಿಳಿದುಕೊಂಡ ಸಂತೋಷ ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಬಗ್ಗೆ ತೀರ್ಪು ನೀಡಿರುವ ನ್ಯಾಯಾಲಯ, ಮಸೀದಿ, ಗಣೇಶೋತ್ಸವ, ನವರಾತ್ರಿ ಹೀಗೆ ಯಾವುದೇ ಸ್ಥಳವಿರಲಿ ಬೇಧಭಾವವಿಲ್ಲದೆ ಅನಧಿಕೃತವಾಗಿ ಲೌಡ್ ಸ್ಪೀಕರ್ಗಳನ್ನು ಅಳವಡಿಸಿದ್ದರೆ ಅದನ್ನು ಪತ್ತೆ ಹಚ್ಚಿ ಕಿತ್ತು ಹಾಕಿ ಎಂದು ಆದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.