ಗುವಾಹಟಿ: ಅಸ್ಸಾಂನ ಬರಪೇಟ ದೇಗುಲಕ್ಕೆ ಪ್ರವೇಶಿಸಲು ಆರ್ಎಸ್ಎಸ್ನವರು ಬಿಡಲಿಲ್ಲ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೀಗ ತೀವ್ರ ಮುಜಗರಕ್ಕೆ ಒಳಗಾಗಿದ್ದಾರೆ. ಅವರ ಹೇಳಿಕೆಯನ್ನು ದೇಗುಲದ ಮುಖ್ಯಸ್ಥರೇ ತಳ್ಳಿ ಹಾಕಿದ್ದಾರೆ.
ನಮ್ಮ ದೇಗುಲದಲ್ಲಿ ಆರ್ಎಸ್ಎಸ್ನವರು ಇಲ್ಲ. ಇದು ಧಾರ್ಮಿಕ ಸ್ಥಳ ಮತ್ತು ಇಲ್ಲಿ ಕೇವಲ ಧಾಂರ್ಮಿಕ ಆಚರಣೆಗಳು ಮಾತ್ರ ನಡೆಯುತ್ತವೆ. ಇಲ್ಲಿಗೆ ರಾಜಕೀಯವನ್ನು ತಂದವರು ಯಾರು? ಎಂದು ದೇಗುಲದ ಮುಖ್ಯಸ್ಥರು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೇ ರಾಹುಲ್ ಬರುತ್ತಾರೆ ಎಂದು ಬೆಳಿಗ್ಗೆ 4 ಗಂಟೆಗಳ ಕಾಲ ಕಾದು ನಿಂತಿದ್ದೆವು, ನಮ್ಮೊಂದಿಗೆ ಹಲವಾರು ಕಾಂಗ್ರೆಸ್ ಮುಖಂಡರುಗಳು ಕೂಡ ಕಾಯುತ್ತಿದ್ದರು. ಆದರೆ ಅವರು ಬರಲೇ ಇಲ್ಲ ಎಂದಿದ್ದಾರೆ.
ಅಲ್ಲದೇ ‘ಮಹಿಳೆಯರು ದೇಗುಲಕ್ಕೆ ದಿನಕ್ಕೆ ಎರಡು ಬಾರಿ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಅವರು ಸರಳ ವ್ಯಕ್ತಿತ್ವದವರು, ರಾಜಕೀಯ ಗೊತ್ತಿಲ್ಲದವರು. ಕಾಂಗ್ರೆಸ್ ಉಪಾಧ್ಯಕ್ಷರನ್ನು ನೋಡಲೂ ಅವರೂ ಗೇಟ್ನ ಬಳಿ ಕಾದು ನಿಂತಿದ್ದರು’ ಎಂದಿದ್ದಾರೆ.
ಬರಪೇಟಾ ದೇಗುಲಕ್ಕೆ ಪ್ರವೇಶಿಸದಂತೆ ಮಹಿಳೆಯೊಬ್ಬಳು ನನ್ನನ್ನು ತಡೆದಳು, ಆಕೆ ಆರ್ಎಸ್ಎಸ್ಗೆ ಸೇರಿದವಳು ಎಂದು ರಾಹುಲ್ ಆರೋಪಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.