ನವದೆಹಲಿ: ದೆಹಲಿಯ ಶಾಕುರ್ ಸ್ಲಂ ತೆರವು ಕಾರ್ಯಾಚರಣೆ ಪ್ರಕರಣದಲ್ಲಿ ರಾಜಕೀಯ ಮಾಡಲು ಪಕ್ಷಗಳು ಮುಂದಾಗಿದೆ.
ಸೋಮವಾರ ಕಾರ್ಯಾಚರಣೆ ನಡೆದ ಸ್ಥಳಕ್ಕಾಗಮಿಸಿ ರಾಹುಲ್ ಗಾಂಧಿ ಎಎಪಿ ಸರ್ಕಾರ ಮತ್ತು ಕೇಂದ್ರದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಈಗ ಸಂಸತ್ತಿನ ಎದುರು ಪ್ರತಿಭಟನೆ ನಡೆಸುತ್ತಿರುವ ಎಎಪಿ ತೆರವು ಕಾರ್ಯಾಚರಣೆ ನಡೆಸುವ ವೇಳೆ ಎಲ್ಲಿಗೆ ಹೋಗಿತ್ತು? ಎಂದು ಪ್ರಶ್ನಿಸಿದ್ದಾರೆ.
ಇದು ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಕ್ರೋಶಕ್ಕೆ ಕಾರಣವಾಗಿದ್ದು, ‘ರಾಹುಲ್ ಒಬ್ಬ ಮಗು, ರೈಲ್ವೇ ಭಾರತ ಸರ್ಕಾರದ ಅಧೀನದಲ್ಲಿ ಬರುತ್ತದೆ ಎಂದು ಆತನ ಪಕ್ಷ ಆತನಿಗೆ ತಿಳಿಸಿಲ್ಲ ಎಂದೆನಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಘಟನೆ ನಡೆದು 48 ಗಂಟೆಯಾಯಿತು, ಎಷ್ಟರವರೆಗೆ ಅವರು ಎಲ್ಲಿಗೆ ಹೋಗಿದ್ದರು, ನ್ಯಾಷನಲ್ ಹೆರಾಲ್ಡ್ನಿಂದ ಈಗ ಅವರಿಗೆ ಬಿಡುವು ಸಿಕ್ಕಿತು ಎಂದೆನಿಸುತ್ತದೆ ಎಂದಿದ್ದಾರೆ.
ಸ್ಲಂ ಕಾರ್ಯಾಚರಣೆಯ ವೇಳೆ ಗುಡಿಸಲಲ್ಲಿದ್ದ ಮಗುವೊಂದು ಸಾವನ್ನಪ್ಪಿದೆ, ಈ ಪ್ರಕರಣವೀಗ ಕೇಂದ್ರ ಮತ್ತು ಎಎಪಿ ನಡುವಣ ಜಟಾಪಟಿಗೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.