ನವದೆಹಲಿ: ದಿವಂಗತ ಯೋಗ ಗುರು ಬಿಕೆಎಸ್ ಐಯ್ಯಂಗಾರ್ ಅವರ 97ನೇ ಜನ್ಮದಿನದ ಅಂಗವಾಗಿ ಗೂಗಲ್ ತನ್ನ ಡೂಡಲ್ ಮೂಲಕ ಅವರಿಗೆ ವಿಶೇಷ ಗೌರವವನ್ನು ಅರ್ಪಿಸಿದೆ.
ಡೂಡಲ್ನಲ್ಲಿ ಗೂಗಲ್ ಎಂಬ ಪದಗಳ ನಡುವೆ ಐಯ್ಯಂಗಾರ್ ಅವರನ್ನು ಹೋಲುವ ಹಿರಿಯ ವ್ಯಕ್ತಿಯೊಬ್ಬ ವಿಭಿನ್ನ ಯೋಗ ಆಸನಗಳನ್ನು ಮಾಡುತ್ತಿರುವ ಹಾಗೇ ಆನಿಮೇಷನ್ ಮಾಡಲಾಗಿದೆ. ಕೆವಿನ್ ಲಾಗ್ಲಿನ್ ಎಂಬುವವರು ಇದನ್ನು ವಿನ್ಯಾಸಗೊಳಿಸಿದ್ದಾರೆ. ಇರಷ್ಯಾ, ಅಮೆರಿಕ, ಇಂಗ್ಲೆಂಡ್, ಇಂಡೋನೇಷ್ಯಾ, ಕೆನಡಾ, ಸ್ಪೇನ್ ಸೇರಿದಂತೆ ಹಲವಾರು ದೇಶಗಳಲ್ಲಿ ಈ ಡೂಡಲ್ ಕಾಣಿಸಿಕೊಳ್ಳಲಿದೆ.
ಐಯ್ಯಂಗಾರ್ ಅವರು ಯೋಗಗಳ ಮೂಲಕ ಇಡೀ ವಿಶ್ವವನ್ನೇ ಗೆದ್ದವರು, ಅದೌಉತ ನಿಯಂತ್ರಣ ಮತ್ತು ಶಿಸ್ತಿನಿಂದ ಕೂಡಿದ ಅವರ ಯೋಗ ಭಂಗಿಗಳು ‘ಐಯ್ಯಂಗಾರ್ ಯೋಗ’ ಎಂದೇ ಪ್ರಸಿದ್ಧಿ ಪಡೆದಿವೆ. ತನ್ನ 80ನೇ ವಯಸ್ಸಿನಲ್ಲೂ ಇವರು ಅರ್ಧ ಗಂಟೆಗಳ ಕಾಲ ಶಿರ್ಶಾಸನ ಮಾಡುತ್ತಿದ್ದರು. ಸಚಿನ್ ತೆಂಡೂಲ್ಕರ್, ಬೆಲ್ಜಿಯಂನ ಕ್ವೀನ್ ಎಲಿಜಬೆತ್ ಸೇರಿದಂತೆ ವಿಶ್ವದ ಅನೇಕ ನಾಯಕರಿಗೆ ಯೋಗ ಕಲಿಸಿದ ಕೀರ್ತಿ ಇವರದ್ದು.
ಟೈಮ್ ಮ್ಯಾಗಜೀನ್ 100 ಪ್ರಭಾವಶಾಲಿ ಜನರ ಪಟ್ಟಿಯಲ್ಲೂ ಇವರು ಸ್ಥಾನವನ್ನು ಪಡೆದುಕೊಂಡಿದ್ದರು. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳ ಮೂಲಕ ಇವರು ಸನ್ಮಾನಿಸಲ್ಪಟ್ಟಿದ್ದಾರೆ. ಡಿ.14, 1918ರಲ್ಲಿ ಜನಿಸಿದ ಇವರು, ಆಗಸ್ಟ್ 20, 2014ರಂದು ತಮ್ಮ 95ನೇ ವಯಸ್ಸಿನಲ್ಲಿ ಮೃತರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.