ನವದೆಹಲಿ: ’ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಂಗವಾಗಿ ಮೊದಲ ಬಾರಿಗೆ ಭಾರತ ಸ್ವದೇಶಿ ನಿರ್ಮಿತ ಮಾರುತಿ ಸುಝುಕಿ ಕಾರುಗಳನ್ನು ರಫ್ತು ಮಾಡಲಿದ್ದು, ಈ ಕಾರುಗಳನ್ನು ಮೊದಲ ಬಾರಿಗೆ ಜಪಾನ್ ಆಮದು ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ಕಂಪೆನಿ ಮಾರುತಿ ಹಾಗೂ ಜಪಾನ್ನ ಸುಝುಕಿ ಕಂಪೆನಿಗಳು ಜತೆಗೂಡಿ ಭಾರತದಲ್ಲಿ ಕಾರುಗಳನ್ನು ಉತ್ಪಾದಿಸಲಿದ್ದು, ಜಪಾನ್ಗೆ ರಫ್ತು ಮಾಡಲಿದೆ. ಭಾರತ ಮತ್ತು ಜಪಾನ್ ಒಂದುಗೂಡಿ ಮುಂದೆ ಸಾಗಬೇಕಿದ್ದು, ಹೈಸ್ಪೀಡ್ ರೈಲು ಮಾತ್ರವಲ್ಲದೆ ಹೈಸ್ಪೀಡ್ ಪ್ರಗತಿ ಕೂಡ ಅಗತ್ಯ ಎಂದು ಈ ವೇಳೆ ಮೋದಿ ಹೇಳಿದ್ದಾರೆ.
ಭಾರತವು ವಾರ್ಷಿಕ 20ರಿಂದ 30 ಸಾವಿರ ಕಾರುಗಳನ್ನು ರಫ್ತು ಮಾಡುವ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ ತನ್ನ ’ಬಲೇನೊ’ ಕಾರುಗಳನ್ನು ರಫ್ತು ಮಾಡಲಿದೆ ಎಂದು ಮಾರುತಿ ಸುಝುಕಿ ಅಧ್ಯಕ್ಷ ಆರ್.ಸಿ. ಭಾರ್ಗವ ತಿಳಿಸಿದ್ದಾರೆ.
ಜಪಾನ್ ಕಾರು ತಯಾರಕ ಕಂಪೆನಿ ಮಾರುತಿ ಸುಝುಕಿ ಭಾರತದ ಸ್ವದೇಶಿ ಉತ್ಪಾದಿತ ’ಬಲೇನೊ’ ಕಾರುಗಳನ್ನು ಜನವರಿ 2016ರಲ್ಲಿ ರಫ್ತು ಮಾಡಲು ಅಂದಾಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.