ಭೋಪಾಲ್: ಇಲ್ಲಿನ ಕರ್ನಲ್ ಅಕಾಡೆಮಿ ಶಾಲೆಯ 8 ವಯಸ್ಸಿನ ಶಶಾಂಕ್ ಬಾಥಮ್ ’ರನ್ ಭೋಪಾಲ್ ರನ್’ ಮ್ಯಾರಥಾನ್ ಸ್ಪರ್ಧೆಯಲ್ಲಿ ಕೇವಲ 59 ನಿಮಿಷಗಳಲ್ಲಿ 11 ಕಿ.ಮೀ. ಮ್ಯಾರಥಾನ್ ಓಟದ ಮೂಲಕ ಪ್ರೇಕ್ಷಕರು ಹಾಗೂ ಸಹ ಓಟಗಾರರನ್ನು ವಿಸ್ಮಯಗೊಳಿಸಿದ್ದಾನೆ. ಈಗ ಈ ಬಾಲಕ ಭಾರತದ ಅತ್ಯಂತ ಕಿರಿಯ ಮ್ಯಾರಥಾನ್ ಓಟಗಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಭೋಪಾಲ್ನಲ್ಲಿ ಡಿ.6ರಂದು ನಡೆದ ಮ್ಯಾರಥಾನ್ನಲ್ಲಿ ಭಾಗವಹಿಸಲು ಕನಿಷ್ಟ ವಯಸ್ಸು 18ವರ್ಷ ಆಗಿದ್ದರೂ 3ನೇ ತರಗತಿಯ ವಿದ್ಯಾರ್ಥಿ ಶಶಾಂಕ್ಗೆ ಮ್ಯಾರಥಾನ್ ಓಟದಲ್ಲಿ ಭಾಗವಹಿಸಲು ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಅನುಮತಿ ನೀಡಿದ್ದರು.
ಟ್ರ್ಯಾಕ್ಗಳಲ್ಲಿ ಓಟಗಳಲ್ಲಿ ಭಾಗವಹಿಸುವ ಮೂಲಕ ತನ್ನ ಪ್ರತಿಭೆಯನ್ನು ತೋರ್ಪಡಿಸಲು ಶಶಾಂಕ್ಗೆ ಆತನ ಪೋಷಕರು, ಶಾಲಾ ಅಧ್ಯಾಪಕರು ಪ್ರೋತ್ಸಾಹಿಸುತ್ತಿದ್ದಾರೆ.
ಉಸೈನ್ ಬೋಲ್ಟ್ನ ಅಭಿಮಾನಿಯಾಗಿರುವ ಶಶಾಂಕ್, ಮಿಲ್ಖಾ ಸಿಂಗ್ನಂತೆ ಓಟಗಾರನಾಗುವ ಕನಸು ಹೊಂದಿದ್ದಾನೆ. ಈತ ಪ್ರತಿ ನಿತ್ಯ ೩೦ ಕಿ.ಮೀ. ಓಡುತ್ತಾನೆ ಎಂದು ಆತನ ಪೋಷಕರು ಹೇಳಿದ್ದಾರೆ. ಶಶಾಂಕ್ನ ಈ ಸಾಧನೆಗೆ ಆತನ ಸಹ ಓಟಗಾರರು ಹಾಗೂ ಶಾಲಾ ಪ್ರಾಂಶುಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.