ಮುಂಬಯಿ: ಕ್ಯಾನ್ಸರ್ನಿಂಧ ಭಾದಿತರಾಗಿ ಶಿಕ್ಷಣದಿಂದ ದೂರವಿರುವ ಹಲವಾರು ಮಕ್ಕಳಿಗೆ ತನ್ನ ಆಸ್ಪತ್ರೆಯಲ್ಲೇ ಶಿಕ್ಷಣವನ್ನು ನೀಡುವ ಮಹತ್ವದ ಕಾರ್ಯವನ್ನು ಮಾಡುತ್ತಿದೆ ಮುಂಬಯಿಯ ಟಾಟಾ ಮೆಮೋರಿಯಲ್ ಆಸ್ಪತ್ರೆ.
ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಸಲುವಾಗಿ ಸಕ್ರಿಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮೈಂಡ್ಸ್ಪ್ರಿಂಗ್ಸ್ ಎನ್ರಿಚ್ಮೆಂಟ್ ಸೆಂಟರ್ನ ವೃತ್ತಿಪರ ಶಿಕ್ಷಕರ ಮೂಲಕ ಆಯೋಜನೆ ಮಾಡುತ್ತಿದೆ. ಈ ಸೆಂಟರ್ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತದೆ, ದೇಶದಾದ್ಯಂತದಿಂದ ಮಕ್ಕಳು ಇಲ್ಲಿಗೆ ಬರುತ್ತಾರೆ, ಭಾಷಾ ಸಮಸ್ಯೆಯನ್ನು ನಿವಾರಿಸಲು ನಾನ್ ವರ್ಬಲ್ ಮೆಥಡ್ನಲ್ಲಿ ಶಿಕ್ಷಣ ಹೇಳಿಕೊಡಲಾಗುತ್ತದೆ. ಇಲ್ಲಿನ ಶಿಕ್ಷಕರನ್ನು ಬಳಸಿಕೊಂಡು ಆಸ್ಪತ್ರೆ ತಮ್ಮ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ.
ಕ್ಯಾನ್ಸರ್ ಪೀಡಿತರಿಗೆಂದು ಇರುವ ಕಂಶಲಕ್ಕೆ ತೆರಳಲು ಕೆಲವು ಮಕ್ಕಳಿಗೆ ಈ ಆಸ್ಪತ್ರೆ ಅರೇಂಜ್ ಮಾಡಿದೆ, ಚಿಕಿತ್ಸೆಯ ಅಂತ್ಯದಲ್ಲಿ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ನ್ನು ನೀಡಲಾಗುತ್ತದೆ, ಇದರಿಂದಾಗಿ ಮತ್ತೆ ಆ ಮಕ್ಕಳು ತಮ್ಮ ಹಿಂದಿನ ಶಾಲೆಗೆ ತೆರಳಿ ಒಂದು ವರ್ಷವನ್ನು ವೇಸ್ಟ್ ಮಾಡದೆ ತರಗತಿಯನ್ನು ಮುಂದುವರೆಸಬಹುದಾಗಿದೆ.
ಈ ಮಕ್ಕಳು ಸಾಮಾನ್ಯತನವನ್ನು ಅನುಭವಿಸಬೇಕು ಮತ್ತು ತಮ್ಮ ಶಿಕ್ಷಣವನ್ನು ಅಡೆತಡೆ ಇಲ್ಲದೇ ಮುಂದುವರೆಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಅವರಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.