ನವದೆಹಲಿ: ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಝೋ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ನವದೆಹಲಿಯಲ್ಲಿ ನಡೆದ ಇಂಡಿಯಾ-ಜಪಾನ್ ಬ್ಯುಸಿನೆಸ್ ಲೀಡರ್ಸ್ ಫೋರಮ್ನಲ್ಲಿ ಭಾಗವಹಿಸಿದರು.
ಈ ವೇಳೆ ಮಾತನಾಡಿದ ಮೋದಿ, ಭಾರತಕ್ಕೆ ಕೇವಲ ಹೈಸ್ಪೀಡ್ ರೈಲು ಮಾತ್ರವಲ್ಲ ಹೈ ಸ್ಪೀಡ್ನ ಪ್ರಗತಿಯೂ ಬೇಕಾಗಿದೆ ಎಂದರು.
ಅದ್ಭುತ ಮಾನವ ಸಂಪನ್ಮೂಲವನ್ನು, ತಂತ್ರಜ್ಞಾನದ ಅಡಿಪಾಯವನ್ನು ಹೊಂದಿರುವ ಭಾರತ ಅವಕಾಶಗಳ ತವರು ಮತ್ತು ಜಪಾನ್ ಪ್ರತಿ ಹಂತದಲ್ಲೂ ನಮ್ಮೊಂದಿಗೆ ಇದೆ. ಇಂದು ಜಪಾನ್ನಲ್ಲಿ 20 ಬಿಲಿಯನ್ ಡಾಲರ್ನೊಂದಿಗೆ ಮೇಕ್ ಇನ್ ಇಂಡಿಯಾ ಅಭಿಯಾನ ನಡೆಯುತ್ತಿದೆ ಎಂದರು.
ಶಿಂಝೋ ಅಬೆ ಮಾತನಾಡಿ, ‘ಬಲಿಷ್ಠ ಭಾರತ ಜಪಾನ್ಗೆ ಒಳ್ಳೆಯದು, ಬಲಿಷ್ಠ ಜಪಾನ್ ಭಾರತಕ್ಕೆ ಒಳ್ಳೆಯದು. ಮೋದಿಯವರ ಆರ್ಥಿಕ ನಿಯಮಗಳು ಹೈಸ್ಪೀಡ್, ಸೇಫ್, ವಾಸ್ತಾವಿಕವಾಗಿದೆ ಮತ್ತು ಹೆಚ್ಚಿನ ಜನರನ್ನು ತನ್ನೊಂದಿಗೆ ಸೇರ್ಪಡೆಗೊಳಿಸಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.