ನವದೆಹಲಿ: ವಿಶ್ವಕಪ್ ಸೆಮಿಫೈನಲ್ನಲ್ಲಿ ಕೇವಲ ಒಂದು ರನ್ ಪಡೆದು ಅಭಿಮಾನಿಗಳ, ಟೀಕಾಕಾರರ ಟೀಕೆಗಳಿಗೆ ಒಳಗಾಗಿದ್ದ ಆಟಗಾರ ವಿರಾಟ್ ಕೊಹ್ಲಿ ಕೊನೆಗೂ ತಮ್ಮ ಮೌನ ಮುರಿದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
‘ಕೇವಲ ಒಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದಕ್ಕೆ ಕೆಟ್ಟ ಕೆಟ್ಟ ಟೀಕೆಗಳನ್ನು ಕೇಳಬೇಕಾಗಿ ಬಂದಿದ್ದು ನನಗೆ ಅತೀವ ನೋವುಂಟು ಮಾಡಿದೆ. ವಿಶ್ವಕಪ್ನ ಎಲ್ಲಾ ಪಂದ್ಯಗಳಲ್ಲೂ ಸ್ಥಿರ ಪ್ರದರ್ಶನ ನೀಡಿದ್ದೇನೆ. ಆದರೆ ಒಂದು ಪಂದ್ಯಕ್ಕಾಗಿ ಬೈಗುಳ ಕೇಳಬೇಕಾಯಿತು’ ಎಂದು ವಿರಾಟ್ ನೋವು ತೋಡಿಕೊಂಡಿದ್ದಾರೆ.
‘ಟೀಕೆಗಳಿಂದಾಗಿ ಸಾಕಷ್ಟು ಜನರ ಮೇಲಿಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಕೆಲವರ ಪ್ರತಿಕ್ರಿಯೆಗಳು ಬೇಸರ ತರಿಸಿದೆ. ನನ್ನ ವಿರುದ್ಧ ಟೀಕೆ ಮಾಡುವವರಿಗೆ ನಾಚಿಕೆಯಾಗಬೇಕು’ ಎಂದಿದ್ದಾರೆ.
ಭಾರತದ ಆರಂಭಿಕ ಪಂದ್ಯದಲ್ಲಿ ಪಾಕಿಸ್ಥಾನದ ವಿರುದ್ಧ 107 ರನ್ ಗಳಿಸಿ ವಿರಾಟ್ ಮಿಂಚಿದ್ದರು. ಬಳಿಕವೂ ತಕ್ಕ ಮಟ್ಟಿಗೆ ಸ್ಥಿರ ಪ್ರದರ್ಶನ ನೀಡಿದ್ದ ಕೊಹ್ಲಿ ಸೆಮಿಫೈನಲ್ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು. ಇದು ಅಭಿಮಾನಿಗಳನ್ನು ಕೆರಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.