ಲಂಡನ್: ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗಾಗಿ ಜಗತ್ತಿಗೆ ಭಾರತ ನೀಡಿದ ಅದ್ಭುತ ಕೊಡುಗೆ ಯೋಗ. ಇದೀಗ ಯೋಗವನ್ನು ಭಾರತದ ಅಮೂಲ್ಯ ಸಾಂಸ್ಕೃತಿಕ ಪರಂಪರೆ ಎಂದು ಘೋಷಿಸಲು ಯುನೆಸ್ಕೋ ಮುಂದಾಗಿದೆ.
ಈ ವಿಷಯವನ್ನು ಯುನೆಸ್ಕೋ ಪ್ರದಾನ ನಿರ್ದೇಶಕಿ ಇರಿನಾ ಬೊಕೊವ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.
‘ನನ್ನ ಬಹಳಷ್ಟು ಮಿತ್ರರು ಯೋಗಾಭ್ಯಾಸ ನಡೆಸುವುದರ ಮೂಲಕ ದೈಹಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಯೋಗ ಭಾರತದ ಅನನ್ಯ ಬದುಕುವ ಪರಂಪರೆ. ಪ್ರಧಾನಿ ನರೇಂದ್ರ ಮೋದಿಯೇ ಅಂತಾರಾಷ್ಟ್ರೀಯ ಯೋಗದಿನದ ನೇತೃತ್ವ ವಹಿಸುವ ಬಗ್ಗೆ ಅಕ್ಟೋಬರ್ನಲ್ಲಿ ನಡೆಯಲಿರುವ ಕಾನ್ಫರೆನ್ಸ್ನಲ್ಲಿ ನಿರ್ಧರಿಸುತ್ತೇವೆ’ ಎಂದು ಇರಿನಾ ತಿಳಿಸಿದ್ದಾರೆ.
ನಾಳೆ ಅವರು ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಭಾರತದ ಮನವಿಯ ಮೇರೆಗೆ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿದೆ. ಇದಕ್ಕೆ 193 ದೇಶಗಳ ಪೈಕಿ 175 ದೇಶಗಳು ಸಮ್ಮತಿ ಸೂಚಿಸಿದ್ದವು. ನಾಳೆ ಮೋದಿ ಯೋಗದ ಬಗೆಗಿನ ಪೋರ್ಟಲ್ನ್ನು ಫ್ರಾನ್ಸ್ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.