ನವದೆಹಲಿ: ಕೇಂದ್ರ ಸರ್ಕಾರದ ಚಿನ್ನ ನಗದೀಕರಣ ಯೋಜನೆ ಜಾರಿಗೆ ಬಂದಿದ್ದು, ಇದೀಗ ಜಗತ್ತಿನ ಅತ್ಯಂತ ಶ್ರೀಮಂತ ದೇಗುಲ ತಿರುಪತಿ ಚಿನ್ನ ಠೇವಣಿ ಯೋಜನೆಯಲ್ಲಿ ಚಿನ್ನ ವಿನಿಯೋಗಿಸಲು ಆಸಕ್ತಿ ತೋರಿದೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಚಿನ್ನ ನಗದೀಕರಣ ಯೋಜನೆ ಇದಾಗಿದೆ. ಆದರೆ ಒಂದು ತಿಂಗಳಲ್ಲಿ ಕೇವಲ 1 ಕೆ. ಜಿ. ಯಷ್ಟು ಚಿನ್ನ ಮಾತ್ರ ಯೋಜನೆಯಲ್ಲಿ ಸೇರ್ಪಡೆಗೊಂಡಿದೆ.
ಅಪಾರ ಆಸ್ತಿ ಇರುವ ತಿರುಪತಿ ದೇವಾಲಯದಲ್ಲಿ ಸುಮಾರು 5.5 ಟನ್ಗಳಷ್ಟು ಚಿನ್ನವನ್ನು ಈ ಯೋಜನೆಯಲ್ಲಿ ವಿನಿಯೋಗಿಸಿ, ಈ ಮೂಲಕ ಚಿನ್ನವನ್ನು ನಗದೀಕರಿಸಿ ಅದನ್ನು ಬಳಸಲಾಗುವುದು ಎಂದು ಹೇಳಲಾಗಿದೆ.
ಈ ಮೊದಲು ತಿರುಪತಿ ದೇಗುಲದ ಚಿನ್ನಾಭರಣಗಳನ್ನು ನಗದೀಕರಣ ಯೋಜನೆಯಡಿಯಲ್ಲಿ ಬ್ಯಾಂಕ್ನಲ್ಲಿಡಲಾಗಿತ್ತು. ಇದು ವರ್ಷಕ್ಕೆ ಕೇವಲ ಶೇ. 1 ರಷ್ಟು ಬಡ್ಡಿ ನೀಡುತ್ತಿತ್ತು. ಕೇಂದ್ರ ಸರ್ಕಾರದ ಚಿನ್ನ ನಗದೀಕರಣ ಯೋಜನೆ ಉತ್ತಮ ಯೋಜನೆಯಾಗಿದ್ದು, ವರ್ಷಕ್ಕೆ ಶೇ. 2.5 ಬಡ್ಡಿ ದೊರಕುತ್ತದೆ. ಈ ಕುರಿತು ದೇಗುಲ ಸಮಿತಿಗೆ ಸೂಚಿಸಲಾಗಿದೆ. ಮುಂದಿನ 15 ದಿನಗಳೊಳಗೆ ಈ ಬಗ್ಗೆ ಚರ್ಚಿಸಿ ಸಮಿತಿಯು ನಿರ್ಧಾರ ಕೈಗೊಂಡು ಚಿನ್ನ ನಗದೀಕರಣ ಯೋಜನೆಗೆ ಚಿನ್ನವನ್ನು ವಿನಿಯೋಗಿಸಬಹುದು ಎಂದು ಆಂಧ್ರಪ್ರದೇಶದ ವಿತ್ತ ಸಚಿವ ವೈ. ರಾಮಕೃಷ್ಣುಡು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.