ಫೇಸ್ಬುಕ್ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜ್ಯೂಕರ್ಬರ್ಗ್ ತನ್ನ ಮಗಳು ಹುಟ್ಟಿರುವ ಬಗ್ಗೆ ಘೋಷಿಸುವ ಸಂದರ್ಭದಲ್ಲಿ ತನ್ನ ಶೇ.99ರಷ್ಟು ಪಾಲನ್ನು ಚಾರಿಟಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಜ್ಯೂಕರ್ಬರ್ಗ್ ಹಾಗೂ ಆತನ ಪತ್ನಿ ಪ್ರಿಸಿಲಾ ಚಾನ್ ಸ್ವಾಮ್ಯದಲ್ಲಿರುವ ಶೇರುಗಳ ಮೌಲ್ಯ 45 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಇವರು ಎಲ್ಲಾ ಸಂಪತ್ತನ್ನು ತಮ್ಮ ಮಕ್ಕಳಿಗೆ ನೀಡುವ ಬದಲು ಚಾರಿಟಿಗೆ ನೀಡಿದ್ದಾರೆ.
ಬಿಲ್ ಗೇಟ್ಸ್, ಮೈಕ್ರಾಸಾಫ್ಟ್ ಸಹ ಸಂಸ್ಥಾಪಕ
ಅವರು 1994ರಲ್ಲಿ ಬಿಲ್ & ಮೆಲಿಂಡಾ ಫೌಂಡೇಷನ್ ಸ್ಥಾಪಿಸಿದ್ದರು. ಪ್ರಸ್ತುತ ಇದು 38 ಬಿಲಿಯನ್ ಡಾಲರ್ ಆಸ್ತಿ ಹೊಂದಿದೆ. ಗೇಟ್ಸ್ ತಮ್ಮ ದೀರ್ಘ ಕಾಲದ ಗೆಳೆಯ ವಾರೆನ್ ಬಫೆಟ್ ಜೊತೆಗೂಡಿ ಇತರ ಕೋಟ್ಯಾಧಿಪತಿಗಳು ತಮ್ಮ ಅರ್ಧದಷ್ಟು ಸಂಪತನ್ನು ದಾನ ನೀಡಲು ಪ್ರೋತ್ಸಾಹಿಸುವ ’ದಿ ಗಿವಿಂಗ್ ಪ್ಲೆಡ್ಜ್’ ಎಂಬ ಪ್ರಚಾರ ಆರಂಭಿಸಿದ್ದಾರೆ.
ಸ್ಟೀವ್ ಕೇಸ್, ಎಒಎಲ್ ಸಹಸಂಸ್ಥಾಪಕ
ತಂತ್ರಜ್ಞಾನ ಬಳಕೆಯೊಂದಿಗೆ ಲೋಕೋಪಕಾರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೇಂದ್ರೀಕರಿಸಲು 1997ರಲ್ಲಿ ಕೇಸ್ ಫೌಂಡೇಷನ್ ಸ್ಥಾಪಿಸಿದರು. ರೆವೊಲ್ಯೂಷನ್ ಎಂಬ ಹೂಡಿಕೆ ಸಂಸ್ಥೆ ಆರಂಭಿಸುವ ಮೂಲಕ ’ಗಿವಿಂಗ್ ಪ್ಲೆಡ್ಜ್’ಗೆ ಸಹಿ ಹಾಕಿದ್ದಾರೆ.
ಮಾರ್ಕ್ ಬೆನಿಯಾಫ್, ಸೇಲ್ಸ್ಫೋರ್ಸ್ ಸಿಇಒ
ಬೆನಿಯಾಫ್ ಇತ್ತೀಚೆಗೆ ಸೇಲ್ಸ್ಫೋರ್ಸ್ ಗಿವ್ಸ್ ಎಂಬ ಪ್ರಚಾರಾಂದೋಲನ ಆರಂಭಿಸಿ ತಂತ್ರಜ್ಞಾನ ಆಧಾರಿತ ಕಂಪೆನಿಗಳು ಸಾನ್ ಫ್ರನ್ಸಿಸ್ಕೊ ಮೂಲದ ಲಾಭ ರಹಿತ ಕಾರ್ಯಗಳಿಗೆ ಕೇವಲ 60 ದಿನಗಳಲ್ಲೇ 10 ಮಿಲಿಯನ್ ಡಾಲರ್ ಏರಿಕೆ ಮಾಡುವಂತೆ ಪ್ರೋತ್ಸಾಹಿಸಿದರು.
ಕಂಪೆನಿಗಳು 1/1/1 ಮಾದರಿಯಲ್ಲಿ ತಮ್ಮ ಷೇರುಗಳ ಶೇ.1ರಷ್ಟು ಪಾಲು, ಶೇ.1ರಷ್ಟು ನೌಕರರ ಸಮಯ, ಶೇ.1ರಷ್ಟು ಸಂಪನ್ಮೂಲಗಳನ್ನು ದಾನ ಮಾಡಲು ಬೆನಿಯಾಫ್ ಪ್ರೋತ್ಸಾಹಿಸಿದ್ದಾರೆ. ಬೆನಿಯಾಫ್ ಹಾಗೂ ಅವರ ಪತ್ನಿ ಲಿನ್ ವೈಯಕ್ತಿಕವಾಗಿ ಯುಸಿಎಸ್ಎಫ್ ಮಕ್ಕಳ ಆಸ್ಪತ್ರೆಗೆ 200 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ.
ಇರ್ವಿನ್ ಜೇಕಬ್ಸ್, ಕ್ವಾಲ್ಕಮ್ ಸಹಸಂಸ್ಥಾಪಕ
ಜೇಕಬ್ ದಂಪತಿಯು ಕೋರಲ್ ಟೆಕ್ ರೂಸ್ವೆಲ್ಟ್ ಐಲೆಂಡ್ ಕ್ಯಾಂಪಸ್, ಎಂಐಟಿ ಶಿಷ್ಯವೃತ್ತಿ ಹಾಗೂ ಸ್ಯಾನ್ ಡೀಗೋ ಸಿಂಫನಿಗೆ ಸುಮಾರು ೫೦೦ ಮಿಲಿಯನ್ ಡಾಲರ್ ನೀಡಿದ್ದಾರೆ.
ಪಿರ್ರಿ ಒಮಿಡ್ಯಾರ್, ಇಬೇ ಸಂಸ್ಥಾಪಕ
ಒಮಿಡ್ಯಾರ್ ಹಾಗೂ ಅವರ ಪತ್ನಿ ಪಾಮ್ ತಂತ್ರಜ್ಞಾನ ಯುಗದ ವಿಶ್ವದ ಅತಿ ಉದಾರತೆ ಹೊಂದಿದ ವ್ಯಕ್ತಿಗಳಾಗಿ ಗುರುತಿಸಿಕೊಂಡಿದ್ದು, 1 ಬಿಲಿಯನ್ ಡಾಲರ್ ದಾನ ಮಾಡಿದ್ದಾರೆ.
ಗೋರ್ಡನ್ ಮೂರ್, ಇಂಟೆಲ್ ಸಹಸಂಸ್ಥಾಪಕ
ಮೂರ್ ಅವರು ಅರ್ಧದಷ್ಟು ಸಂಪತ್ತನ್ನು ಮೂರ್ ಪ್ರತಿಷ್ಠಾನ ಸ್ಥಾಪಿಸಲು ವ್ಯಯಿಸಿದ್ದು, ಒಟ್ಟಾರೆ 1 ಬಿಲಿಯನ್ಗೂ ಅಧಿಕ ಹಣವನ್ನು ಧರ್ಮಾರ್ಥ ಕಾರ್ಯಗಳಿಗೆ ನೀಡಿದ್ದಾರೆ.
ಸಂಸ್ಥೆಯು ಪರಿಸರ ಸಂರಕ್ಷಣೆ, ಆರೋಗ್ಯ ಕ್ರಮಗಳು ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಸಮುದಾಯದ ವಿಚಾರಗಳ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದು, 5 ಬಿಲಿಯನ್ ಡಾಲರ್ಗೂ ಅಧಿಕ ಆಸ್ತಿಯನ್ನು ಹೊಂದಿದೆ.
ಎಲಾನ್ ಮಸ್ಕ್, ಸಿಇಒ, ಟೆಸ್ಲಾ
ಅವರು ಈಗಾಗಲೇ ಮರು ಉತ್ಪನ್ನ ಶಕ್ತಿ, ವಿಜ್ಞಾನ ಮತ್ತು ಇಂಜಿನಿಯರಿಂಗ್ ಶಿಕ್ಷಣ ಹಾಗೂ ಮಕ್ಕಳ ಆರೋಗ್ಯಕ್ಕೆ 12.9 ಬಿಲಿಯನ್ ಡಾಲರ್ ಸಂಪತನ್ನು ದಾನ ಮಾಡಿದ್ದಾರೆ. ಎಲಾನ್ ಮಸ್ಕ್ ಅವರು ಟೆಸ್ಲಾದಿಂದ ಕೇವಲ ವಾರ್ಷಿಕ 1 ಡಾಲರ್ ಮಾತ್ರ ಪಡೆಯುತ್ತಿದ್ದಾರೆ.
ಲ್ಯಾರಿ ಪೇಜ್, ಗೋಗಲ್ ಸಿಇಒ
ಗೂಗಲ್ ಸಿಇಒ ಪೇಜ್ ಅವರು ತಮ್ಮ ಸಂಪತ್ತನ್ನು ದಾನ ಮಾಡುವ ಬಗೆಗೆ ಸ್ವಲ್ಪ ಅನನ್ಯ ಕಲ್ಪನೆಯನ್ನು ಹೊಂದಿದ್ದಾರೆ. ಮಕ್ಕಳಿಗೆ ಆಸ್ತಿಯನ್ನು ನೀಡುವ ಬದಲು ವಿಶ್ವವನ್ನು ಪರಿವರ್ತಿಸುವ ದೊಡ್ಡ ಯೋಜನೆ, ಕಲ್ಪನೆಗಳನ್ನು ಹೊಂದಿರಯುವ ಎಲಾನ್ ಮಸ್ಕ್ ಮುಂತಾದ ಉದ್ಯಮಿಗಳಿಗೆ ನೀಡಲು ಮುಂದಾಗಿದ್ದಾರೆ.
ಸಾರಾ ಬ್ಲ್ಯಾಕ್ಲಿ, ಸಿಇಒ, ಸ್ಪ್ಯಾನ್ಸ್
ಮಹಿಳೆಯರಿಗೆ ಸಂಬಂಧಿಸಿದ ಚ್ಯಾರಿಟಿಗಳಿಗೆ ದಾನ ನೀಡಲು 2013ರಲ್ಲಿ ’ಗಿವಿಂಗ್ ಪ್ಲೆಡ್ಜ್’ಗೆ ಸಹಿ ಹಾಕಿದ ವಿಶ್ವದ ಪ್ರಥಮ ಮಹಿಳೆ ಎನಿಸಿಕೊಂಡಿದ್ದಾರೆ.
ಲ್ಯಾರಿ ಎಲ್ಲಿಸನ್, ಒರಾಕಲ್ ಸಂಸ್ಥಾಪಕ
ಅದ್ದೂರಿ ಜೀವನಶೈಲಿಯ ನಡುವೆಯೂ ಲ್ಯಾರಿ ಎಲಿಸನ್ ತಮ್ಮ ವೈದ್ಯಕೀಯ ಪ್ರತಿಷ್ಠಾನ ಮತ್ತಿತರ ಧರ್ಮ ಕಾರ್ಯಗಳಿಗೆ ಗಳಿಕೆಯ ಶೇ.95ರಷ್ಟು ದಾನ ನೀಡಕು ಬದ್ಧರಾರಿದ್ದಾರೆ.
ಬಹುಪಾಲು ಸಂಪತ್ತನ್ನು ಚ್ಯಾರಿಟಿಗಳಿಗೆ ನೀಡುವುದರ ಜೊತೆಗೆ ತನ್ನ ಮಕ್ಕಳು ಇನ್ನೂ ಶಿಶುಗಳಿದ್ದಾಗಲೇ ಒರಾಕಲ್ ಶೇರುಗಳನ್ನು ಅವರ ಹೆಸರಿಗೆ ವರ್ಗಾಯಿಸಿದ್ದಾರೆ.
ಪೌಲ್ ಅಲ್ಲೆನ್, ಮೈಕ್ರಾಸಾಫ್ಟ್ ಸಹಸಂಸ್ಥಾಪಕ
ಪೌಲ್ ಅಲ್ಲೆನ್ ಯಾವುದೇ ನೇರ ವಂಶಸ್ಥರನ್ನು ಹೊಂದಿಲ್ಲದಿದ್ದರೂ ಅವರ ಕುಟುಂಬ ಪರೋಪಕಾರಿ ಸೇವೆಗಳಲ್ಲಿ ಪಾಲ್ಗೊಳ್ಳುತ್ತಿದೆ. ಅಲ್ಲೆನ್ ತಮ್ಮ 17.2 ಬಿಲಿಯನ್ ಡಾಲರ್ ಸಂಪತ್ತನ್ನು ತನ್ನ ಸಹೋದರಿ ಜಾಡಿ ಅಲ್ಲೆನ್ ಜೊತೆ ನಡೆಸುತ್ತಿರುವ ಪೌಲ್ ಜಿ. ಅಲ್ಲೆನ್ ಪ್ರತಿಷ್ಠಾನ, ಅಲ್ಲೆನ್ ಇನ್ಸ್ಟಿಟ್ಯೂಟ್ ಫಾರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮುಂತಾದ ಸಂಸ್ಥೆಗಳಿಗೆ ನೀಡುವ ಯೋಜನೆ ಹೊಂದಿದ್ದಾರೆ.
ಡಸ್ಟಿನ್ ಮಾಸ್ಕೋವಿಟ್ಸ್, ಸಿಇಒ, ಅಸಾಮಾ
ಫೇಸ್ಬುಕ್ ಉದ್ಯೋಗಿ, ಡಸ್ಟಿನ್ ಮೋಸ್ಕವಿಟ್ಸ್ ’ಗಿವಿಂಗ್ ಪ್ಲೆಡ್ಜ್’ಗೆ ಸಹಿ ಹಾಕಿದ ವಿಶ್ವದ ಅತ್ಯಂತ ಕಿರಿಯ ಶತಕೋಟ್ಯಾಧಿಪತಿ. ಮೋಸ್ಕವಿಟ್ಸ್ ಹಾಗೂ ಆತನ ಜೊತೆಗಾರ, ವಾಲ್ ಸ್ಟ್ರೀಟ್ ಜರ್ನಲ್ ಮಾಜಿ ವರದಿಗಾರ ಕ್ಯಾರಿ ಟ್ಯೂನ ತಮ್ಮ ಸಂಪತ್ತು ವಿತರಿಸಲು ಸಹಾಯಕವಾಗುವಂತೆ ಗುಡ್ ವೆಂಚರ್ಸ್ ಸ್ಥಾಪಿಸಿದ್ದಾರೆ.
ಶೆರಿಲ್ ಸ್ಯಾಂಡ್ಬರ್ಗ್, ಫೇಸ್ಬುಕ್ ಸಿಒಒ
ಶೆರಿಲ್ ಸ್ಯಾಂಡ್ಬರ್ಗ್ ತಮ್ಮ ದಿವಂಗತ ಪತಿ ಡೇವ್ ಗೋಲ್ಡ್ಸ್ಬರ್ಗ್ ಜೊತೆ 2014ರಲ್ಲಿ ಗಿವಿಂಗ್ ಪ್ಲೆಡ್ಜ್ಗೆ ಸಹಿ ಹಾಕಿದ್ದು, ಇದರ ನಿರ್ದಿಷ್ಟ್ಟ ಕಾರಣ ಸೂಚಿಸಿಲ್ಲ.
ರಿಚರ್ಡ್ ಬ್ರಾನ್ಸನ್, ವರ್ಜಿನ್ ಗ್ರೂಪ್ ಸ್ಥಾಪಕ
ರಿಚರ್ಡ್ ಬ್ರಾನ್ಸನ್ ಅವರ ಮಕ್ಕಳು ಸ್ವತಃ ದಾನಿಗಳಾಗಿದ್ದಾರೆ. ರಿಚರ್ಡ್ ಅವರ ಮಗ ಸ್ಯಾಮ್ ಸನ್ಡಾಗ್ ಪಿಕ್ಚರ್ಸ್ ನಿರ್ಮಾಣ ಕಂಪೆನಿ ಸ್ಥಾಪಿಸಿದ್ದರೆ, ಅವರ ಮಗಳು ಹಾಲ್ಲಿ ಬಿಗ್ ಚೇಂಜ್ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿದ್ದಾರೆ.
ರೀಡ್ ಹೇಸ್ಟಿಂಗ್ಸ್, ನೆಟ್ಫ್ಲಿಕ್ಸ್ ಸಂಸ್ಥಾಪಕ
ನೆಟ್ಫ್ಲಿಕ್ಸ್ ಸ್ಥಾಪಕ ಹೇಸ್ಟಿಂಗ್ಸ್ ಮತ್ತು ಅವರ ಪತ್ನಿ ಪ್ಯಾಟಿ ಕ್ವಿಲಿನ್ ತಮ್ಮ ನಿವ್ವಳ ಗಳಿಕೆ ಕೇವಲ 280 ಮಿಲಿಯನ್ ಡಾಲರ್ ಇದ್ದಾಗಲೇ 2012ರಲ್ಲಿ ಗಿವಿಂಗ್ ಪ್ಲೆಡ್ಜ್ಗೆ ಸಹಿ ಹಾಕಿದ್ದರು. ಪ್ರಸ್ತುತ ಅವರ ನಿವ್ವಳ ಲಾಭ 1.6 ಬಿಲಿಯನ್ ಹೊಂದಿದೆ.
ಮಾರ್ಕ್ ಜ್ಯುಕರ್ಬರ್ಗ್, ಫೇಸ್ಬುಕ್ ಸಿಇಒ
ಇತ್ತೀಚೆಗೆ ಮಾರ್ಕ್ ಜ್ಯುಕರ್ಬರ್ಗ್ ತನ್ನ ಮಗಳು ಮ್ಯಾಕ್ಸ್ ಜನಿಸಿರುವ ಬಗ್ಗೆ ಘೋಷಿಸಿದ್ದರು. 46.8 ನಿವ್ವಳ ಗಳಿಕೆ ಹೊಂದಿರುವ ಜ್ಯುಕರ್ಬರ್ಗ್, ಸ್ಯಾನ್ ಫ್ರಾನ್ಸಿಸ್ಕೊ ಆಸ್ಪತ್ರೆಗೆ 3 ಶಸ್ತ್ರಚಿಕಿತ್ಸಾ ಕೊಠಡಿ, ತುರ್ತು ಘಟಕ ಕೊಠಡಿ ವಿಸ್ತರಿಸಲು ಹಾಗೂ 2 ಆಘಾತ ನಿರ್ವಹಣೆ ಕೊಠಡಿ ನಿರ್ಮಿಸಲು ಫೆ.೨೦೧೫ರಲ್ಲಿ 75 ಮಿಲಿಯನ್ ಡಾಲರ್ ದಾನ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.