ಬೆಳಗಾವಿ : ಸಂಶಯಾಸ್ಪದ ರೀತಿಯಲ್ಲಿ ಛಾಯಾಚಿತ್ರ ಸೆರೆ ಹಿಡಿದ ಪ್ರಕರಣದಲ್ಲಿ ಬಂಧಿಸಿದ ಮಹಮ್ಮದ್ ಹುಸೇನ್ ಅಲಿ ಖುರೇಶಿಯ ಮಾಹಿತಿ ಆಧರಿಸಿ ಕಲಬುರ್ಗಿಯಲ್ಲಿ ಮೂವರು ಯುವಕರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಬೆಳಗಾವಿ ಸೇರಿದಂತೆ ಹಲವು ವಿಮಾನನಿಲ್ದಾಣ ಪ್ರೇಕ್ಷಣೀಯ ಸ್ಥಳ, ವಿಟಿಯು ಸ್ವಾಗತ ಕಮಾನು, ಗಡಿಯಾರ ಗೋಪುರ, ಕ್ಯಾಂಟೀನ್, ವಿಟಿಯು ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ, ಮಾರ್ಕೆಟ್ನ ಮಸೀದಿ, ಮುಜಾವರ್ ಸ್ವೀಟ್ಮಾರ್ಟ್, ಬೋಗಾರ್ವೇಸ್ನ ಪಾರ್ಕಿಂಗ್ ಸ್ಥಳ, ಎಸ್ಬಿಐನ ಕೇಂದ್ರ ಕಚೇರಿ ಸೇರಿದಂತೆ 36 ಸ್ಥಳಗಳ ಛಾಯಾಚಿತ್ರಗಳನ್ನು ಈತ ಸೆರೆ ಹಿಡಿದಿದ್ದಾನೆ.
ಈ ಸ್ಥಳಗಳ ಛಾಯಾಚಿತ್ರ ತೆಗೆಯಲು 5 ಸಾವಿರ ರೂ ಈತನ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎನ್ನಲಾಗಿದೆ. ಈ ವ್ಯಕ್ತಿ ಉಗ್ರಗಾಮಿ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾನೆಯೇ? ಪ್ರಮುಖ ನಗರಗಳಲ್ಲಿ ಅಥವಾ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯವೆಸಗಲು ಯೋಜನೆ ರೂಪಿಸಲಾಗುತ್ತಿತ್ತೆ? ಎಂದು ವಿಚಾರಣೆ ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.