ಬೆಂಗಳೂರು : ಇತ್ತೀಚಿನ ಕೆಲವು ದಿನಗಳಿಂದ ಗೊಂದಲದ ಗೂಡಾಗಿರುವ ಕರ್ನಾಟಕ ಲೋಕಾಯುಕ್ತದಲ್ಲಿ ಹೊಸಬೆಳವಣಿಗೆ ನಡೆಯುತ್ತಿದೆ.
ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಪದಚ್ಯುತಿ ಪ್ರಸ್ತಾಪವನ್ನು ವಿಧಾನಸಭಾ ಸ್ಪೀಕರ್ ಗೆ ಸರಕಾರ ಮತ್ತು ಪ್ರತಿಪಕ್ಷಗಳು ಸಲ್ಲಿಸಿದೆ. ಈಗ ಇನೋರ್ವ ಉಪಲೋಕಾಯುಕ್ತರನ್ನು ನೇಮಿಸಲು ಸರಕಾರ ಮುಂದಾಗಿದೆ.
ಈ ಹಿಂದೆ ಸರಕಾರ ನ್ಯಾ.ಮಂಜುನಾಥ್ ಅವರ ಹೆಸರನ್ನು ಸೂಚಿಸಿದ್ದು ರಾಜ್ಯಪಾಲರು ಅಂಕಿತ ಹಾಕದೇ ಹಿಂದಕ್ಕೆ ಕಳುಹಿಸಿದ್ದರು. ಆದರೆ ಈ ಬಾರಿ ಉಪಲೋಕಾಯುಕ್ತರ ನೇಮಕಕ್ಕೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಜತೆಗೆ ಸರಕಾರ ಮೊದಲು ಚರ್ಚೆ ನಡೆಸಿದೆ.
ಟಿ.ಬಿ. ಜಯಚಂದ್ರ ನ್ಯಾಯಮೂರ್ತಿಗಳ ಜತೆಗೆ ಚರ್ಚಿಸಿದಾಗ , ನ್ಯಾ ಅಜಿತ್ ಗುಂಜಾಳ್ ಅಥವಾ ನ್ಯಾ. ಎನ್.ಆನಂದ್ ಇರ್ವರಲ್ಲಿ ಯಾರನ್ನು ಉಪ ಲೋಕಾಯುಕ್ತರಾಗಿ ನೇಮಕ ಮಾಡಿದರು ಮುಖ್ಯ ನ್ಯಾಯಮೂರ್ತಿಗಳಿಂದಲೂ ವಿರೋಧ ವ್ಯಕ್ತವಾಗಲ್ಲ ಎಂದು ತಿಳಿದು ಬಂದಿದೆ.
ಅಂತೂ ಇಂತೂ ಉಪಲೋಕಾಯುಕ್ತರ ನೇಮಕಾತಿಗೆ ಇನ್ನೋಂದು ಸುತ್ತಿನ ರಾಜಕೀಯ ಹಣಾಹಣಿ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.