ಇಸ್ಲಾಮಾಬಾದ್: ಸೌಹಾರ್ದತೆಯ ಪ್ರತೀಕವಾಗಿ ತನ್ನ ಕಸ್ಟಡಿಯಲ್ಲಿದ್ದ ಭಾರತದ ಒಟ್ಟು ೫೭ ಮೀನುಗಾರಿಕಾ ದೋಣಿಗಳನ್ನು ಪಾಕಿಸ್ಥಾನ ಶನಿವಾರ ಬಿಡುಗಡೆಗೊಳಿಸಿದೆ.
ಅಲ್ಲಿನ ಪ್ರಧಾನಿ ನವಾಝ್ ಶರೀಫ್ ಅವರು ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭಕ್ಕಾಗಿ ಭಾರತಕ್ಕೆ ಆಗಮಿಸಿದ ವೇಳೆ ಈ ಈ ದೋಣಿಗಳನ್ನು ಬಿಡುಗಡೆಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.
ಬಿಡುಗಡೆಯ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಮಾ.9ರಂದು 8 ಸದಸ್ಯರುಳ್ಳ ಭಾರತದ ನಿಯೋಗ ಕರಾಚಿಗೆ ತೆರಳಿ ಪಾಕಿಸ್ಥಾನದ ಸಮುದ್ರ ಭದ್ರತಾ ಪಡೆಗಳನ್ನು ಭೇಟಿಯಾಗಿತ್ತು.
ಪಾಕಿಸ್ಥಾನದಿಂದ ಆಗಮಿಸುವ ದೋಣಿಗಳನ್ನು ಅದರ ಮಾಲೀಕರಿಗೆ ಹಿಂದಿರುಗಿಸುವುದಾಗಿ ಕೇಂದ್ರ ಭರವಸೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.