ಫ್ಲೋರಿಡಾ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಅಮೆರಿಕ ವಿಶ್ವವಿದ್ಯಾನಿಲಯವೊಂದು ಸ್ಕಾಲರ್ಶಿಪ್ ಆರಂಭಿಸಿದೆ. ಈ ಮೂಲಕ ವಿಶ್ವ ಮೆಚ್ಚಿದ ವಿಜ್ಞಾನಿಗೆ ಗೌರವವನ್ನು ಸೂಚಿಸಿದೆ.
ಸೌತ್ ಫ್ಲೋರಿಡಾ ಯೂನಿವರ್ಸಿಟಿ ಕಲಾಂ ಹೆಸರಲ್ಲಿ ಸ್ನಾತಕೋತರ ವಿದ್ಯಾರ್ಥಿಗಳಿಗೆ ವಾರ್ಷಿಕ 1 ಕೋಟಿ ರೂಪಾಯಿಯ ಸ್ಕಾಲರ್ಶಿಪ್ ಆರಂಭಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇಲ್ಲಿ ಎಂಜಿನಿಯರಿಂಗ್ ಅಥವಾ ವಿಜ್ಞಾನದಲ್ಲಿ ಪಿಎಚ್ಡಿ ಪದವಿ ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಪಡೆಯಲು ಅರ್ಹರಾಗಿರುತ್ತಾರೆ.
2012ರಲ್ಲಿ ಕಲಾಂ ಅವರು ಈ ವಿಶ್ವವಿದ್ಯಾಲಯದ ಗೌರವ ಅತಿಥಿಯಾಗಿ ಭಾಗವಹಿಸಿ, ಹಸಿರು ಶಕ್ತಿ ಮತ್ತು ಪರಿಸರದ ಬಗ್ಗೆ ಉಪನ್ಯಾಸ ನೀಡಿದ್ದರು. ಇದರ ಗೌರವಾರ್ಥವಾಗಿ ಇದೀಗ ಸ್ಕಾಲರ್ಶಿಪ್ ಆರಂಭಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.