ಪುತ್ತೂರು: ಎಲ್ಲಾ ಜನರ ಆರೋಗ್ಯಕ್ಕೆ ಹಿತವಾದ ಚಾಕೋಲೇಟ್ಗಳನ್ನು ಕ್ಯಾಂಪ್ಕೋ ತಯಾರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಅಲ್ಲದೆ ಇದೀಗ ವಿಶ್ವವ್ಯಾಪಿಯಾಗಿ ಬೆಳೆದ ಕ್ಯಾಂಪ್ಕೋ ಎಲ್ಲರ ಗಮನ ಸೆಳೆದಿದೆ ಎಂದು ಕೈವಲ್ಯ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.
ಅವರು ಪುತ್ತೂರಿನ ಕೂರ್ನಡ್ಕದ ಕ್ಯಾಂಪ್ಕೋ ಚಾಕಲೇಟು ಪ್ಯಾಕ್ಟರಿಗೆ ಶನಿವಾರ ಸಂಜೆ ಭೇಟಿ ನೀಡಿ ಚಾಕಲೇಟು ಉತ್ಪಾದನೆಯನ್ನು ವೀಕ್ಷಣೆ ಮಾಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಆರೋಗ್ಯ ಪೂರ್ಣ ಚಾಕಲೇಟು ಹೇಗೆ ಉತ್ಪಾದನೆ ಮಾಡಲಾಗುತ್ತದೆ ಎಂಬುದನ್ನು ವೀಕ್ಷಣೆ ಮಾಡಿ ತುಂಬಾ ಸಂತೋಷಪಟ್ಟಿದ್ದೇನೆ. ನಿಸರ್ಗದಲ್ಲಿ ಭಗವಂತನು ಒಳಿತು ಮತ್ತು ಕೆಟ್ಟದು ಎಂಬ ಎರಡು ಪದಾರ್ಥಗಳನ್ನು ಕೊಟ್ಟಿದ್ದಾನೆ. ಅದರಲ್ಲಿ ಉತ್ತಮ ದಾರಿಯನ್ನು ಆಯ್ಕೆ ಮಡಿಕೊಂಡರೆ ಶಾಶ್ವತ ಸುಖ ಸಿಗುತ್ತದೆ. ಕೆಟ್ಟ ದಾರಿಯನ್ನು ಹಿಡಿದರೆ ಕ್ಷಣಿಕ ಸುಖ ಸಿಗುತ್ತದೆ. ಈ ನಿಟ್ಟಿನಲ್ಲಿ ಯಾವಾಗಲೂ ಒಳಿತನ್ನೇ ಬಯಸಬೇಕು ಎಂದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರು ಸ್ವಾಮೀಜಿಯವರನ್ನು ಸ್ವಾಗತಿಸಿ ಪಾದಪೂಜೆ ನೆರವೇರಿಸಿದರು. ವೇದಿಕೆಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಚ್ಚುತ ಪ್ರಭು, ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟರಿ ಮ್ಯಾನೇಜರ್ ಫ್ರಾನ್ಸಿಸ್, ಪ್ರೊಡಕ್ಷನ್ ಮೆನೇಜರ್ ಅನುಫ್ ಉಪಸ್ಥಿತರಿದ್ದರು. ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಸಾರ್ವಜನಿಕ ಸಂಪರ್ಕಾಧಿಕಾರಿ ರಾಮಚಂದ್ರ ಕಾಮತ್ ಮತ್ತು ಅವರ ಪತ್ನಿ ಪುಷ್ಪಲತಾ ಕಾಮತ್ ಸ್ವಾಮೀಜಿಯವರಿಗೆ ಫಲಪುಷ್ಪ ನೀಡಿ ಗೌರವಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.