×
Home About Us Advertise With s Contact Us

ಡಿ.ಕೆ.ರವಿ ಅನುಮಾಸ್ಪದ ಸಾವು : ಸಿಬಿಐಗೆ ಪ್ರಕರಣ ಒಪ್ಪಿಸದಿದ್ದಲ್ಲಿ ಕರಾಳ ದಿನ

imagesಪುತ್ತೂರು : ಐಎಎಸ್ ಅಧಿಕಾರಿ ಡಿ.ಕೆ.ರವಿ ಅನುಮಾಸ್ಪದ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸದೇ ಇದ್ದಲ್ಲಿ ಮುಖ್ಯಮಂತ್ರಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ದಿನವನ್ನು ಕರಾಳ ದಿನವಾಗಿ ಆಚರಿಸಲಾಗುವುದು ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚಂದ್ರಶೇಖರ ಎ ಹೇಳಿದ್ದಾರೆ.

ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.ದಕ್ಷ ಅಧಿಕಾರಿಯ ಸಾವಿನ ವರದಿ ಬರುವ ಮೊದಲೇ ಆತ್ಮಹತ್ಯೆ ಎಂದು ಬಿಂಬಿಸುವ ರಾಜಕಾರಣಿಗಳು, ಇವರ ಸೇವಕರಂತಿರುವ ಪೊಲೀಸ್ ಅಧಿಕಾರಿಯ ಹೇಳಿಕೆ ಪ್ರಕರಣವನ್ನು ತಿರುಚುವಂತಿದೆ.

ದಕ್ಷ ಅಧಿಕಾರಿಗಳನ್ನು ಹಾಗೂ ಮಾಹಿತಿ ಹಕ್ಕು ಹೋರಾಟಗಾರರನ್ನು ನಿಗೂಢವಾಗಿ ಕಣ್ಮರೆಯಾಗುವಂತೆ ಮಾಡುವ ಪ್ರಕರಣ ನಡೆಯುತ್ತಿದ್ದರೂ, ಸರ್ಕಾರ ಸೂಕ್ತ ಸ್ಪಂದನೆಯೇ ನೀಡುತ್ತಿಲ್ಲ. ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಸಾವಿನ ಪ್ರಕರಣದಲ್ಲಿ ನ್ಯಾಯ ನೀಡದ ಸರ್ಕಾರ, ಇದೀಗ ಡಿ.ಕೆ.ರವಿ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಸಿದ್ಧತೆ ನಡೆಸುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

 

Recent News

Back To Top
error: Content is protected !!