ತಿರುವನಂತಪುರ: ಸೆಕ್ಸ್ ರಾಕೆಟ್ ನಡೆಸುತ್ತಿದ್ದ 11 ಮಂದಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ. ಅಚ್ಚರಿಯ ವಿಷಯವೆಂದರೆ ಬಂಧಿತರಲ್ಲಿ ಇಬ್ಬರು ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸಿದ್ದ ದಂಪತಿಗಳು.
ಆನ್ಲೈನ್ನಲ್ಲಿ ಸೆಕ್ಸ್ ರಾಕೆಟ್ ಜಾಲ ನಡೆಸುತ್ತಿರುವುದರ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಸೈಬರ್ ಪೊಲೀಸರ ಸಹಾಯದೊಂದಿಗೆ ಮಂಗಳವಾರ ಹಾಗೂ ಬುಧವಾರ ಕೇರಳದಾದ್ಯಂತ ಕಾರ್ಯಾಚರಣೆ ನಡೆಸಿ ಒಟ್ಟು 11 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು 2014 ರಲ್ಲಿ ಕಿಸ್ ಆಫ್ ಲವ್ ಪ್ರತಿಭಟನೆಯ ಕಾರ್ಯಕ್ರಮವನ್ನು ಆಯೋಜಿಸಿದ್ದ ದಂಪತಿಗಳಾದ ರೇಶ್ಮಿ ನಾಯರ್ ಮತ್ತು ಆಕೆಯ ಪತಿ ರಾಹುಲ್ ಪಶುಪಾಲನ್ ಕೂಡಾ ಆರೆಸ್ಟ್ ಆಗಿದ್ದಾರೆ.
ಅಪ್ರಾಪ್ತ ಬಾಲಕಿಯರನ್ನು ಬಳಸಿಕೊಂಡು ಕೂಚು ಸುಂದರಿಗಳ್ ಎಂಬ ಫೇಸ್ಬುಕ್ ಪೇಜ್ ಮುಖಾಂತರ ದಂಧೆ ನಡೆಸಲಾಗುತ್ತಿತ್ತು. ಮೂಲಗಳ ಪ್ರಕಾರ ರೇಶ್ಮಿ ಮತ್ತು ರಾಹುಲ್ ದಂಪತಿಗಳು ಅಪ್ರಾಪ್ತ ಬಾಲಕಿಯರನ್ನು ಸರಬರಾಜು ಮಾಡಲು ಸಹಕರಿಸುತ್ತಿದ್ದರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.