ಬೆಳ್ತಂಗಡಿ : ಇಲ್ಲಿನ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ರೂ. 50 ಲಕ್ಷ ಮಂಜೂರಾಗಿದೆ ಎಂದು ಬೆಳ್ತಂಗಡಿ ನಗರ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಪ್ರಕಟಿಸಿದರು.ಅವರು ಬುಧವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಇದರ ಶಾಖಾ ಗ್ರಂಥಾಲಯ ಬೆಳ್ತಂಗಡಿ ಇಲ್ಲಿ ನಡೆದ ರಾಷ್ಟೀಯ ಗ್ರಂಥಾಲಯ ಸಪ್ತಾಹ ಆಚರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟ್ಟಡಕ್ಕೆ ಸರಕಾರದಿಂದ 50 ಲಕ್ಷ ರೂ. ಮಂಜೂರಾಗಿದೆ. ಶೀಘ್ರವಾಗಿ ಮಂಜೂರಾದ ಜಾಗದಲ್ಲಿ ಗ್ರಂಥಾಲಯ ನಿರ್ಮಾಣ ಆಗಬೇಕಾಗಿದೆ. ಗ್ರಂಥಾಲಯದ ಸ್ವಂತ ಕಟ್ಟಡಕ್ಕೆ ಬೇಕಾದ 5 ಸೆಂಟ್ಸ್ ಜಾಗವನ್ನು ಗುರುತಿಸಲಾಗಿದೆ. ಆದರೆ ಅದು ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಬಂಧಪಟ್ಟವರಲ್ಲಿ ಮಾತನಾಡಿ ಸರಿಪಡಿಸಲಾಗುವುದು. ಕಟ್ಟಡದ ನಕ್ಷೆ, ಪ್ರಸ್ತಾವನೆಯನ್ನು ಶೀಘ್ರವಾಗಿ ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದ ಅವರು ಈಗಿರುವ ಗ್ರಂಥಾಲಯವು ವಾಚಕರಿಗೆ ಅತ್ಯುತ್ತಮವಾಗಿ ಸೇವೆ ನೀಡುತ್ತಿದೆ ಎಂದರು.ಗ್ರಂಥಾಲಯಕ್ಕೆ ಸಿಬಂದಿಗಳ ಕೊರತೆ ಇದೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದು ಸರಕಾರಕ್ಕೆ ಮನವಿ ನೀಡುವ ಬಗ್ಗೆ ಭರವಸೆ ನೀಡಿದರು.
ನ.ಪಂ.ಅಧ್ಯಕ್ಷೆ ನಳಿನ್ ವಿಶ್ವನಾಥ್ ಸಪ್ತಾಹವನ್ನು ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಸದಸ್ಯ ಸಂತೋಷ ಜೈನ್, ಪುತ್ತೂರು ಶಾಖಾ ಗ್ರಂಥಾಲಯ ಗ್ರಂಥಪಾಲಕಿ ನಮಿತಾ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಸಿಬ್ಬಂದಿಗಳಾದ ಕೇಶವ, ಲೋಲಾಕ್ಷಿ, ಮಂಜುಳಾ ಮತ್ತಿತರರು ಸಹಕರಿಸಿದರು. ಬೆಳ್ತಂಗಡಿ ಶಾಖಾ ಗ್ರಂಥಾಲಯ ಗ್ರಂಥ ಪಾಲಕಿ ಪ್ರಣೀತಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಹ ಗ್ರಂಥಪಾಲಕ ಕೇಶವ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.