ಬೆಳ್ತಂಗಡಿ : ಜಿಲ್ಲೆಯ ಸಹಕಾರಿ ಸಂಘದ ಗ್ರಾಹಕರು ಅಂತರ್ಜಾಲದ ಮೂಲಕ ಸಹಕಾರಿ ಸಂಘಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ನೂತನ ತಂತ್ರಾಂಶವನ್ನು ಅಳವಡಿಸಲು ಸಿದ್ಧತೆಗಳು ನಡೆಯುತ್ತಿವೆಎಂದುದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ|ಎಂ.ಎನ್. ರಾಜೇಂದ್ರಕುಮಾರ್ ಹೇಳಿದ್ದಾರೆ.
ಅವರು ಮಂಗಳವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಧರ್ಮಸ್ಥಳ ಇದರ ಸಾಧನಾ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಂಡಲ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಬೆಳ್ತಂಗಡಿ, ದ.ಕ. ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಹಾಗೂ ಬೆಳ್ತಂಗಡಿ ತಾಲೂಕಿನಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಸಹಕಾರಿ ಇಲಾಖೆ ದ.ಕ. ಜಿಲ್ಲೆ, ಮಂಗಳೂರು ಆಶ್ರಯದಲ್ಲಿ ನಡೆದ 62ನೇ ಅಖಿಲ ಭಾರತ ಸಹಕಾರ ಸಪ್ತಾಹ-2015ದ ನಾಲ್ಕನೇ ದಿನದ ಕಾರ್ಯಕ್ರಮವನ್ನು ತೆಂಗಿನ ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸಂಘದ ಗ್ರಾಹಕರಲ್ಲಿ ಅಗತ್ಯವಿರುವವರಿಗೆ ಮಾತ್ರ ಹೊಸ ತಂತ್ರಜ್ಞಾನದ ಪರಿಚಯನ್ನು ನೀಡಲಾಗುವುದು. ಇದರಿಂದ ಗ್ರಾಹಕರು ಎಲ್ಲಿ ಬೇಕಾದರೂ ವ್ಯವಹರಿಸಲು ಸಾಧ್ಯವಿದೆ. ಅಲ್ಲದೆ ದ್ವಿಚಕ್ರ ಖರೀದಿಗೆ ಶೇ.ನೂರಷ್ಟು ಸಾಲವನ್ನು ಸಹಕಾರಿ ಸಂಘಗಳು ನೀಡಲಿವೆ ಎಂದು ವಿವರಿಸಿದರು.
ಸಾಲ ಮರುಪಾವತಿಯಲ್ಲಿ ನಮ್ಮ ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ಜನರ ಬೇಡಿಕೆಗನುಗುಣವಾಗಿ ಸೇವೆ ನೀಡಬೇಕಾಗುತ್ತದೆ. ಸಂಘಗಳು ಕೇವಲ ಲಾಭಾಂಶ, ಡಿವಿಡೆಂಡ್ ಬಗ್ಗೆ ಮಾತ್ರ ಯೋಚಿಸದೆ ಗ್ರಾಮದ ಅಭಿವೃದ್ಧಿ ಮಾಡುವತ್ತ ಗಮನಹರಿಸಬೇಕು. ಅದಕ್ಕೆ ಬೇಕಾದ ಶಕ್ತಿ ಸಹಕಾರಿ ಸಂಸ್ಥೆಗಳಲ್ಲಿದೆ. ಅದಕ್ಕಾಗಿ ಗ್ರಾಹಕರ ಸಮಾವೇಶವನ್ನು ನಡೆಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸಲಹೆ ನೀಡಿದರು.
ಕೃಷಿಗೆ ಸರಿಯಾದ ಬೆಲೆ ಇದ್ದರೆ ಮಾತ್ರ ರೈತಕೃಷಿಯಲ್ಲಿ ಆಸಕ್ತಿ ತೋರುತ್ತಾನೆ. ಇಲ್ಲದಿದ್ದಲ್ಲಿ ನಗರದತ್ತ ಮುಖ ಮಾಡುತ್ತಾನೆ. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ರೈತರೊಂದಿಗೆ ಇಟ್ಟುಕೊಂಡ ಮಾನವೀಯತೆ ಮತ್ತು ಬಾಂಧವ್ಯದಿಂದಾಗಿ ಆತ್ಮಹತ್ಯೆಯಂತಹ ದುರಂತಗಳು ಸಂಭವಿಸಿಲ್ಲ ಎಂದ ಅವರು ಸಂಘಗಳು ಇನ್ನಷ್ಟು ಬಲಾಢ್ಯರಾಗಬೇಕು ಎಂದು ಆಶಿಸಿದರು. ಈ ಸಂದರ್ಭಅವರು ಧರ್ಮಸ್ಥಳ ಸಹಕಾರ ಸಂಘದ ವತಿಯಿಂದ ನೀಡಲಾಗುವ ಗ್ರಾಮದ ಅಶಕ್ತ ಮಕ್ಕಳಿಗೆ ಆರ್ಥಿಕ ನೆರವನ್ನು ಹಾಗೂ ಸೋಲಾರ್ ಅಳವಡಿಸುವ ಸದಸ್ಯರಿಗೆ ಸಾಲವನ್ನು ವಿತರಿಸಿದರು.
ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ ಅವರು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ, ಸಹಕಾರ ಸಂಘಗಳು ಹಾಪ್ಕಾಮ್ಸ್ನಂತೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸಬೇಕು. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಇಂದು ಗ್ರಾಮೀಣ ಜನರು ಅತ್ಯುತ್ತಮ ವ್ಯವಸ್ಥೆಯನ್ನು ಹೊಂದಿರುವುದಕ್ಕೆ ಸಹಕಾರ ಸಂಘಗಳೇ ಕಾರಣ ಎಂದರು.
ಜಿಲ್ಲಾ ಸಹಕಾರಿಯೂನಿಯನ್ಅಧ್ಯಕ್ಷ ಹರೀಶ್ಆಚಾರ್ಅವರು, ಸಹಕಾರಿ ಸಂಘಗಳನ್ನು ಖಾಸಗೀಕರಣಕ್ಕೆ ಒಳಪಡಿಸಲು ಪ್ರಯತ್ನಿಸಲಾಗುತ್ತದೆ.ಕೆಲವಾರ ಸಂಘಗಳು ಅದಕ್ಕೆ ಸಮ್ಮತಿಯನ್ನು ನೀಡಿವೆ. ಜಿಲ್ಲೆಯಲ್ಲಿಯಾವುದೇ ಸಂಘಗಳು ಖಾಸಗೀಕರಣಗೊಳ್ಳದಂತೆ ಎಚ್ಚರವಹಿಸಬೇಕು ಎಂದರಲ್ಲದೆಡಿಜಿಟಲ್ಇಂಡಿಯಾದಿಂದಲೂ ಸಹಕಾರ ಸಂಘಗಳಿಗೆ ಅಪಾಯವಿರುವುದನ್ನು ಬೊಟ್ಟು ಮಾಡಿದರು.
ಅಧ್ಯಕ್ಷತೆಯನ್ನು ಧರ್ಮಸ್ಥಳ ಪ್ರಾ.ಕೃ.ಪತ್ತಿನ ಸಹಕಾರ ಸಂಘದಅಧ್ಯಕ್ಷ ಪಿ. ರಘುಚಂದ್ರರಾವ್ ವಹಿಸಿದ್ದರು. ಸಹಕಾರಿ ಸಂಘಗಳ ನಡುವಿನ ಸಹಕಾರವನ್ನು ಬಲಪಡಿಸುವ ಬಗ್ಗೆ ವಾಣಿ ಪದವಿಪೂರ್ವಕಾಲೇಜಿನ ಪ್ರಾಚಾರ್ಯಯದುಪತಿಗೌಡ ಮಾತನಾಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಸುಂದರಗೌಡಇಚ್ಚಿಲ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸಾವಿತ್ರಿರೈಕೆ., ಧರ್ಮಸ್ಥಳ ಸಹಕಾರ ಸಂಘದಉಪಾಧ್ಯಕ್ಷೆ ಶಶಿಕಲಾ, ನಿರ್ದೇಶಕರುಗಳು, ಮಾಜಿಅಧ್ಯಕ್ಷ ಬಿ. ಭುಜಬಲಿ ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭ ಸಂಘದ ವತಿಯಿಂದ ಎಂಎನ್ಆರ್ ಮತ್ತು ಸಂಘದ ಮಾಜಿ ಅಧ್ಯಕ್ಷ ಕೆ.ಶಂಕರರಾಮ ರಾವ್ ಅವರನ್ನು ಸಮ್ಮಾನಿಸಲಾಯಿತು. ದ.ಕ.ಜಿ.ಕೇ.ಸ.ಬ್ಯಾಂಕಿನ ನಿರ್ದೇಶಕ ನಿರಂಜನ ಬಾವಂತಬೆಟ್ಟು ಭೇಟಿ ನೀಡಿದರು.
ಇದಕ್ಕೂ ಮೊದಲು ಹಿರಿಯ ಸಹಕಾರಿ ಕೆ.ಶಂಕರರಾಮರಾವ್ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭ ಕೆಎಂಸಿ ಮಂಗಳೂರು ಅವರ ಸಹಕಾರದೊಂದಿಗೆ ಬೆನಕ ಹೆಲ್ತ್ ಸೆಂಟರ್ ಉಜಿರೆ ಇವರಿಂದ ಹೃದಯ ಮತ್ತು ಸ್ತ್ರೀರೋಗ ತಜ್ಞರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಸಂಘದ ನಿರ್ದೇಶಕ ಹರಿದಾಸಗಾಂಭೀರ ಸ್ವಾಗತಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಿ. ಸುಬ್ರಮಣ್ಯ ವಂದಿಸಿದರು.ಶ್ರೀನಿವಾಸ ಹಾಗೂ ನಿತ್ಯಾನಂದಶೆಟ್ಟಿಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.