ಬೆಳ್ತಂಗಡಿ : ಸುಜನ ಶಿಕ್ಷಣ ಸಂಸ್ಥೆ ಬೆಂಗಳೂರು ಇದರ ಸಂಚಾಲಕ, ಉದ್ಯಮಿ, ಕೃಷಿಕ ಬೆಳ್ತಂಗಡಿ ಮೂಲದ ಎನ್. ಎ. ಗೋಪಾಲ ಶೆಟ್ಟಿ (59) ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಮಂಗಳವಾರ ನಿಧನ ಹೊಂದಿದ್ದಾರೆ.
ಇವರು ಪ್ರಸ್ತುತ ಬೆಳ್ತಂಗಡಿ ಬಂಟರ ಸಂಘದ ಉಪಾಧ್ಯಕ್ಷರಾಗಿ, ಲಯನ್ಸ್ಕ್ಲಬ್ನ 317ಡಿಯ ವಲಯ2ರ ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಕೊಡುಗೈ ದಾನಿಯಾದ ಇವರು ಎನ್. ಎ. ಗೋಪಾಲಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಮೂಲಕ ಕಳೆದ 15 ವರ್ಷಗಳಿಂದ ಬೆಂಗಳೂರು, ಸಕಲೇಶಪುರ, ಬೆಳ್ತಂಗಡಿ ಮುಂತಾದೆಡೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಪುಸ್ತಕ ವಿತರಿಸುತ್ತಿದ್ದರು.
ಬಡ ಮಹಿಳೆಯರಿಗೆ ಸೀರೆ ವಿತರಣೆ, ಬಂಟ ಸಮುದಾಯದ ಬಡಕುಟುಂಬದ ವಿವಾಹವಾಗುವ ಹೆಣ್ಣು ಮಕ್ಕಳಿಗೆ ಧಾರೆಸೀರೆ ವಿತರಣೆ ಮಾಡುತ್ತಿದ್ದರು. ಬೆಳ್ತಂಗಡಿ ಲಯನ್ಸ್ನ ಅಧ್ಯಕ್ಷರಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಬೆಳ್ತಂಗಡಿ ಲಯನ್ಸ್ಕ್ಲಬ್ನ್ನು 42 ವರ್ಷಗಳ ಇತಿಹಾಸದಲ್ಲೇ ಲಯನ್ಸ್ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆಯಲು ಕಾರಣೀಭೂತರಾದವರು. ಈ ಬಾರಿ ತಾಲೂಕಿನ ಸುಮಾರು 6 ಕಡೆಗಳಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಿದ್ದರು.
ಕರ್ನಾಟಕ ರಕ್ಷಣಾ ವೇದಿಕೆಯ ಸಂಚಾಲಕರಾಗಿ, ಜಾತ್ಯಾತೀತ ಜನತಾದಳದ ಬೆಂಗಳೂರು ಗ್ರಾಮಾಂತರದ ಜಿಲ್ಲಾಧ್ಯಕ್ಷರಾಗಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡು ಯುವಕರಿಗೆ ಮಾರ್ಗದರ್ಶಕರಾಗಿದ್ದರು. ಮೃತರು ಪತ್ನಿ ಮತ್ತು 3 ಹೆಣ್ಣು ಮಕ್ಕಳು 1 ಓರ್ವಗಂಡು ಮಗ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.