ಬೆಳ್ತಂಗಡಿ : ಯುವ ಜನತೆ ಕೃಷಿಯನ್ನು ಬಿಟ್ಟು ನಗರದ ಕಡೆಗೆ ವಲಸೆ ಹೋಗುತ್ತಿದ್ದಾರೆ. ಕೃಷಿ ಭೂಮಿ ಹಡೀಲು ಬೀಳುತ್ತಿದ್ದು ಇದರಿಂದ ಕೃಷಿ ನಾಶವಾಗುತ್ತಿದೆ. ಸ್ವಾವಲಂಬಿ ಬದುಕಿಗೆ, ಉತ್ತಮ ಆಹಾರಕ್ಕಾಗಿ ಕೃಷಿಯನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು ಇದರ ನಿರ್ಲಕ್ಷ್ಯದಿಂದಲೇ ಆಹಾರ ಧಾನ್ಯಗಳಿಗೆ ಇತರರನ್ನು ಅವಲಂಬಿಸಬೇಕಾಗಿದೆ ಎಂದು ಬಂಟ್ವಾಳದ ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಮುಂಡಾಜೆ ಗ್ರಾಮದ ಅಗರಿಬೈಲು ಗದ್ದೆಯಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ, ನಬಾರ್ಡ್ ಪ್ರಯೋಜಿತ ರೈತ ಸೇವಾ ಕೂಟ ಮುಂಡಾಜೆ ಯುವಕ ಮಂಡಲ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಾಮೂಹಿಕ ಸಹಕಾರಿ ಬೇಸಾಯದ ಪರಿಕಲ್ಪನೆಯೊಂದಿಗೆ 62ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಸಂದರ್ಭ ಕಂಡಡೊಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿಯನ್ನು ಉಳಿಸಿ ಬೆಳೆಸಲು ಬಂಟ್ವಾಳದಲ್ಲಿ ತುಳುನಾಡ ಕೃಷಿ ಕ್ರಾಂತಿ ಕಾರ್ಯಕ್ರಮ ಹಮ್ಮಿಕೊಂಡ ನಂತರ 250 ಎಕ್ರೆ ಭತ್ತದ ಕೃಷಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆ ಹೆಚ್ಚಾಗಲು ಕೃಷಿಗೆ ಉತ್ತೇಜನ ನೀಡಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ನಿರ್ದೇಶಕ ಮನೋಜ್ ಮೆನೆಜಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇರಳ ಸರಕಾರ ಯುವಕರು ಕೃಷಿಗೆ ಆಕರ್ಷಿತರಾಗಲು ರೈತ ಯೋಜನೆ ಆರಂಭಿಸಿದ್ದರಿಂದ ಪದವಿಯಾದ ಕೂಡಲೇ ಯುವಕರು ಕೃಷಿಯತ್ತ ಆಕರ್ಷಿತರಾಗುತಿದ್ದಾರೆ. ಕೃಷಿಯನ್ನು ಉಪ ಕಸುಬು ಎಂದು ಚಿಂತಿಸಿದರೆ ಮುಖ್ಯ ವೃತ್ತಿ ಎಂದು ಚಿಂತಿಸುವ ಅಗತ್ಯವಿದೆ ಎಂದರು.
ಮುಂಡಾಜೆ ಗ್ರಾ. ಪಂ. ಅಧ್ಯಕ್ಷೆ ಶಾಲಿನಿ, ಮಂಗಳೂರು ಆಕಾಶವಾಣಿ ಕೃಷಿ ರಂಗ ಕಾರ್ಯಕ್ರಮದ ಕಾರ್ಯನಿರ್ವಾಹಕ ಟಿ. ಶ್ಯಾಮ್ ಪ್ರಸಾದ್, ಬೆಳ್ತಂಗಡಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪಿ. ನಾರಾಯಣ ಪೂಜಾರಿ, ಪತ್ರಕರ್ತ ಲಕ್ಷ್ಮೀ ಮಚ್ಚಿನ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ಎಸ್. ಕುಲಾಲ್, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಡಿ. ಎ. ರಹಿಮಾನ್, ಸಂಘದ ಉಪಾಧ್ಯಕ್ಷ ವಿ. ಟಿ. ಸೆಬಾಸ್ಟಿನ್, ಮೃತ್ಯುಂಜಯ, ಮುಂಡಾಜೆ ಯುವಕ ಮಂಡಲದ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ರೈತ ಸೇವಾ ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಜೋಷಿ, ಭತ್ತದ ಗದ್ದೆಯ ಮಾಲಕ ಅಗರಿ ರಾಮಣ್ಣ ಶೆಟ್ಟಿ, ದೇರಣ್ಣ ಶೆಟ್ಟಿ ಉಪಸ್ಥಿತರಿದ್ದರು.
ಗ್ರಾ. ಪಂ ಅಧ್ಯಕ್ಷ ಶಾಲಿನಿ ವಿಜಯ ಕುಮಾರ್, ಆಕಾಶವಾಣಿಯ ಕೃಷಿ ನಿರ್ದೇಶಕ ಟಿ ಶ್ಯಾಮ್ಪ್ರಸಾದ್, ಪತ್ರಕರ್ತ ಲಕ್ಷ್ಮೀ ಮಚ್ಚಿನ, ಕೃಷಿ ಅಧಿಕಾರಿ ನಾರಾಯಣ ಪೂಜಾರಿ, ಪತ್ರಕರ್ತರ ಸಂಘದ ಅಧ್ಯಕ್ಷ ಬಿ ಎಸ್ ಕುಲಾಲ್, ಪ್ರಮುಖರಾದ ಡಿ. ಎ ರಹಿಮಾನ್, ಸಂಘದ ಉಪಾಧ್ಯಕ್ಷ ವಿ. ಟಿ ಸೆಬಾಸ್ಟಿಯನ್, ನಿರ್ದೇಶಕರಾದ ಕೊರಗಪ್ಪ ನಾಯ್ಕ್, ಮಚ್ಚಿಮಲೆ ಅನಂತ ಭಟ್, ಪ್ರಕಾಶ್ ನಾರಾಯಣ್, ಗೋವಿಂದ ಚಿಪ್ಲೂಣ್ಕರ್, ಸಹಸಂಘಟಕರಾದ ಗೋಪಾಲಕೃಷ್ಣ ಜೋಶಿ, ಎಂ ವಿಶ್ವನಾಥ ಶೆಟ್ಟಿ, ನಾಮದೇವ ರಾವ್, ಮೋಹನಚಂದ್ರ ಗೋಖಲೆ, ಅಗರಿ ರಾಮಣ್ಣ ಶೆಟ್ಟಿ, ದೇರಣ್ಣ ಶೆಟ್ಟಿ, ಅಮ್ಮಿ ಪೂಜಾರಿ, ಲಿಂಗಪ್ಪ ಗೌಡ, ಮಿನಿ ಬೇಬಿ, ಅನಂತರಾವ್ ಚಾರ್ಮಾಡಿ, ಅಶೋಕ್ ಕುಮಾರ್ ಜೈನ್, ಕೊರಗಪ್ಪ ಗೌಡ ಚಾರ್ಮಾಡಿ, ನವೋದಯ ಗುಂಪಿನ ಉಮೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಸುರ್ಯ ಉಪಸ್ಥಿತರಿದ್ದರು. ಭತ್ತದ ಬೆಳೆಗೆ ಪ್ರೋತ್ಸಾಹ ನೀಡುವ ಉದ್ಧೇಶದಿಂದ ಮಹಾಸಭೆಯಲ್ಲಿ ಭಾಗವಹಿಸಿದ ೬೭ ಮಂದಿ ಭತ್ತ ಬೆಳೆಯುವವರಿಗೆ ತಲಾ ೧ ಸಾವಿರ ರೂ. ಗಳ ಪ್ರೋತ್ಸಾಹ ಧನವನ್ನೂ ಘೋಶಿಸಲಾಯಿತು. ಮುಂಡಾಜೆ ಬ್ಯಾಂಕ್ನ ಅಧ್ಯಕ್ಷ ಎನ್. ಎಸ್. ಗೋಖಲೆ ಪ್ರಸ್ತಾವಿಸಿ, ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಫಡ್ಕೆ ವಂದಿಸಿದರು. ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.