ತಮಿಳುನಾಡು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ದಕ್ಷಿಣ ಭಾರತದ ಹಲವೆಡೆ ಮಳೆಯ ಆರ್ಭಟ ಮುಂದುವರೆದಿದೆ. ತಮಿಳುನಾಡಿನ ವೆಲ್ಲೋರ್ನ ಜವಾಥಿರಾಮ ಸಮುಥೀರಮ್ನ ಹಳ್ಳಿಗರು ಜೀವಭಯದಲ್ಲೇ ವಾಸಿಸುವಂತಾಗಿದೆ.
ಈ ಪ್ರದೇಶದ ಸಮೀಪದಲ್ಲೇ ಇರುವ ಸರೋವರವೊಂದು ತುಂಬಿ ಹರಿಯುತ್ತಿದ್ದು, ಇಲ್ಲಿನ ಸುಮಾರು 4000 ನಿವಾಸಿಗಳು ತಮ್ಮ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗುವ ಭಯದಲ್ಲೇ ಜೀವಿಸುತ್ತಿದ್ದಾರೆ. ಈ ಸರೋವರ ಸುಮಾರು 400 ವರ್ಷಗಳಷ್ಟು ಹಳೆಯದಾಗಿದ್ದು, ಇದರ ಸುತ್ತಲಿನ ಗೋಡೆ ದುರ್ಬಲಗೊಂಡಿದೆ ಎನ್ನಲಾಗಿದೆ. ಇದರ ಸುತ್ತಲಿನ ಸುಮಾರು 130 ಎಕರೆ ಭತ್ತದ ಜಮೀನು ಸೇರಿದಂತೆ ನಾರಾಯಣಪುರಮ್ ಪಂಚಾಯತ್ ಪ್ರದೇಶ ನೀರುಪಾಲಾಗುವ ಭೀತಿಯಲ್ಲಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಿತ್ತೂರು ಜಿಲ್ಲೆಯ ಕಾಳಂಗಿ ಜಲಾಶಯದ ಕ್ರಸ್ಟ್ ಗೇಟ್ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ.
24 ಗಂಟೆಗಳ ಕಾಲ ಹೀಗೇ ನಿರಂತರ ಧಾರಾಕಾರ ಮಳೆ ಸುರಿಯಲಿದ್ದು, ಇನ್ನು 2-3 ದಿನ ಸಾಮಾನ್ಯ ಮಳೆಯಾಗುವ ಸಂಭವವಿದೆ ಎಂದು ತೀರ ಪ್ರದೇಶದಲ್ಲಿರುವವರಿಗೆ ಮುನ್ನೆಚ್ಚರಿಕಾ ಕ್ರಮವನ್ನು ನೀಡಲಾಗಿದೆ.
ರಸ್ತೆ, ಜನವಸತಿ ಪ್ರದೇಶ, ಸುರಂಗ ಮಾರ್ಗ ಎಲ್ಲವೂ ಜಲಾವೃತವಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ.
ಬೆಂಗಳೂರಿನಲ್ಲೂ ಬೆಳಗ್ಗಿನಿಂದಲೇ ಮಳೆ ಸುರಿಯುತ್ತಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿದ್ದ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಟೆಸ್ಟ್ ಮ್ಯಾಚ್ ಕೂಡಾ ಮಳೆಯ ಕಾರಣದಿಂದ ಮುಂದೂಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.