ಮಾಲ್ಡೀವ್ಸ್ : ಮಾಲ್ಡೀವ್ಸ್ ಅಧ್ಯಕ್ಷ ಅಬ್ಡುಲ್ ಯಮೀನ್ ಮಾಲ್ಡೀವ್ಸ್ನಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ. ಈ ಮೂಲಕ ಸರಕಾರದ ವಿರುದ್ಧ ಮಾತನಾಡುವವರ ವಿರುದ್ಧ ಮತ್ತು ಅಂತಹ ಕೆಲಸ ಮಾಡುವವರನ್ನು ಬಂಧಿಸುವಂತೆ ಭದ್ರತಾ ಪಡೆಗಳಿಗೆ ಆದೇಶ ನೀಡಲಾಗಿದೆ.
ಪ್ರತಿಪಕ್ಷನಾಯಕ ಮತ್ತು ಮಾಲ್ಡೀವ್ಸ್ ಡೆಮೋಕ್ರಾಟಿಕ್ ಪಕ್ಷದ ನಾಯಕ ಮೊಹಮ್ಮದ್ ನಾಶೀದ್ ಅವರನ್ನು ಭಯೋತ್ಪಾದನಾ ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ. ಇದಕ್ಕೆ ತೀರ್ವ ವಿರೋಧವೂ ವ್ಯಕ್ತವಾಗಿದೆ.
ಸೆ. 28ರಂದು ಹನಿಮೂನ್ ರಾಷ್ಟ್ರ ಎಂದು ಕರೆಯಲ್ಪಡುವ ಮಾಲ್ಡೀವ್ಸ್ನಲ್ಲಿ ಯಮೀನ್ ಅವರು ಪ್ರಯಾಣಿಸುತ್ತಿದ್ದ ಸ್ಪೀಡ್ ಬೋಟ್ ಸ್ಪೋಟಗೊಂಡಿದ್ದು ಅವರ ಹೆಂಡತಿ ಮತ್ತು ಇರ್ವರು ಗಾಯಗೊಂಡಿದ್ದರು.ಆದರೆ ಯುಎಸ್ ಫೆಡರಲ್ ಏಜನ್ಸಿಯು ಬಾಂಬ್ ಸ್ಪೋಟಗೊಂಡ ಲಕ್ಷಣಗಳು ಕಾಣುತ್ತಿಲ್ಲ ಎಂದು ಹೇಳುತ್ತಿದೆ.
ತುರ್ತು ಪರಿಸ್ಥಿತಿಯನ್ನು ಹೇರಿರುವುದರಿಂದ ರಾಷ್ಟ್ರಪತಿ ಮತ್ತು ಜನಪ್ರತಿನಿಧಿಗಳನ್ನು ಮಹಾ ಅಭಿಯೋಗದಿಂದ ತೆಗೆಯುವಂತಿಲ್ಲ. ಆದರೆ ಜನರನ್ನು ಅಪರಾಧ ಕೃತ್ಯಗಳಿಗೆ ಶಿಕ್ಷಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.